Thursday, December 20, 2007
myHarate:"ಹೀಗೊಂದು ಕಾಲ - ಹೀಗೊಂದು ಹರಟೆ"
ಈ weatheರೆ ತೀರ ಕರಾಬಾಗಿದೆ ಕನ್ರೀ.. ರಾತ್ರೆಯೆಲ್ಲಾ ಚುಮು-ಚುಮು ಚಳಿ, ಹಗಲೆಲ್ಲ ಮೈ ಉರಿಯೊ ಶೆಕೆ, ಕಫವಿಲ್ಲದ ಕೆಮ್ಮಿನಂತಿರೊ ಮಳೆತರಲಾಗದ ಚದುರಿದ ಮೋಡಗಳು, ಮಾಮರದಲ್ಲಿ ಸವಿಗಾನದ ಬದಲು ಈಗತಾನೆ ಮೂಡಿರೊ ಚಿಗುರುಗಳ ಬಾಡೊ ಆರ್ತನಾದ, ರೋಡ್ ಪಕ್ಕ ಮುಂಜಾವಿನ ಮಂಜಿನಂತೆ ಹಾರೊ ಧೂಳು. ತೊಳೆದಿರೋ ಚಪ್ಪಲ್ ತುಂಬ ಅಂಟಿಕೊಂಡ ಧೂಳು, ಹೊಸದಾಗಿ ಹಾಕಿದ jeans ಪಕ್ಕನೂ ನೆಗಿತಾ ಇದೆ ಕನ್ರೀ. ಕೆಮ್ಮುಬಾರದಿದ್ರೂ ಕೆಮ್ಮಬೇಕೆನಿಸುತ್ತೆ ಕನ್ರೀ. ದೂಳಿಗೊಮ್ಮೆ ಕ್ಯಾಕರಿಸಿ ಉಗಿಬೇಕಂತನಿಸುತ್ತೆ ಕನ್ರೀ.. ಒಂದಲ್ಲ ಎರಡಲ್ಲ, ಎಲ್ಲ ವಿಶಯದಲ್ಲು ನಂದು complaintse ಕನ್ರೀ. ದಶಂಬರದ ಚಳಿಗಾಲ ಈ ತರ ಇರುತ್ತೆ ಅಂತ ಕನಸಿನಾಗೂ ಅನ್ಸಿಲ್ಲ ಕನ್ರೀ.. :-(
Subscribe to:
Post Comments (Atom)
1 comment:
ಯಾಕೊ ಈ ಲೇಖನ ಓದಿ ಕೆ.ಎಸ್.ನ ಅವರ ಈ ಕವನ ನೆನಪಾಗುತ್ತಿದೆ ;-)
ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು
ಬಂತಲ್ಲ ಬೇಸಿಗೆ, ‘ಕೆಟ್ಟಬಿಸಿಲ್ ‘ ಎಂದರು
ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!!
ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂಗಳ ಕಾಲದಲ್ಲಿ ಹಣ್ಣ ಹೊಗಳುವರು;
‘ಹಣ್ಣಿನ ಗಾತ್ರ ಪೀಚು’ ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!!
ನಿಂತವರ ಕೇಳುವರು: ನೀನೇಕೆ ನಿಂತೆ ?
ಮಲಗಿದರೆ ಗೊಣಗುವರು: ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೆ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!!
ಓದಿದರೆ ಹೇಳುವರು: ಮತ್ತೊಮ್ಮೆ ಬರಿಯೊ
ಬರೆದಿಡಲು ಬೆದಕುವರು: ಬರವಣಿಗೆ ಸರಿಯೊ?
ಇವರ ಬಯಕೆಗಳೇನೊ! ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!!
Post a Comment