Thursday, December 9, 2010

myKavana:"ಚಳಿಗಾಲ"

ಊಟದ ತಂಬಳಿ... ಕರಿ ಕಂಬಳಿಗೆ...
ದಪ್ಪನೆ ಹಾಸಿಗೆ... ಬೆಚ್ಚನೆ ಉಸಿರಿಗೆ...
ನೆಚ್ಚಿನ ಮಡದಿಗೆ... ತೊಡೆಯಲಿ ಮಲಗಿದ ಹಸು ಕಂದಮ್ಮನಿಗೆ...
ಹಚ್ಚನೆ ಹಸುರಿಗೆ... ಕೆಂಪನೆ ಹರಿವೆಗೆ...
ನೀಲಿಯ ಬಾನಿಗೆ... ಮಬ್ಬಿನ ತೇರಿಗೆ...
ಹನಿ ಹನಿ ನೀರಿಗೆ... ತಂಪಿನ ಗಾಳಿಗೆ...
ಮಾಮರ ಚಿಗುರಿಗೆ... ಕೋಗಿಲೆ ಕೂಗಿಗೆ...
ದಪ್ಪನೆ ಅಂಗಿಗೆ... ಬಿಳಿ ಮುಂಡಾಸಿಗೆ...
ಚುಮು ಚುಮು ಚಳಿಗೆ... ಕ್ಯಾಮರ ಕಣ್ಣಿಗೆ
...
ಈ ಚಳಿ ಅರ್ಪಣೆ!







10 comments:

Chiranthana said...

I always loved your poems n pics .. mainly it comes out of ur life ... with ease.. very nice

Shanmukharaja M said...

thank you, and the comments are rightly predicted!

Sushrutha Dodderi said...

ಮಿಸ್ಸಿಂಗ್ ತೋಟದ ತಣ್ಣೆಳಲು, ಎಳೆಕಿರಣ, ಅಡಿಕೆ ಮರಗಳ ನಡುವೆ ಕಟ್ಟಿದ ಜೇಡರಬಲೆ ಮೇಲೆ ನಿಂತ ಇಬ್ಬನಿ ಹನಿಗಳು, ಹರಿದ ಬಾಳೆಲೆ ಮೇಲಿನ ಕೊಳೆ ಔಷಧಿಯ ಬಿಳ್ಬಿಳೀ ಕಲೆಗಳು, ಉದುರಿದ ಕೆಂಪಡಿಕೆ, ಗಡಿಕಾದಿಗೆಯಲ್ಲಿ ಹರಿಯೋ ತಣ್ಣನೆ ನೀರು, ಮನೆ ಬಾವಿಯಲ್ಲಿ ಬಿಡೋದಿಕ್ಕೆ ಹಾಳೆಯಲ್ಲಿ ಮೀನು ಹಿಡಿಯದು, ದನ್ವಿನ್ ಕರಕ್ಕಾಗಿ ಹೆಕ್ಕೋ ಹೊಂಬಾಳೆ, ಕಾಫಿ ಹಣ್ಣು ಕೊಯ್ಬೇಕಾದ್ರೆ ಕಚ್ಚೋ ಕೊಣಜಿಗಳು, ಅಂಗಳದಲ್ಲಿ ಅಡ್ಕೆ ಹರ್ಗದು, ಕೆಂಪು-ಹಸಿರು ಬೇರ್ಬೇರೆ ಮಾಡದು, ಅಡ್ಕೆ ಸುಲಿಯೋರಿಗೆ ಅಂಗಳಕ್ಕೆ ಲೈಟ್ ಎಳ್ಕೊಡದು, ಮೆಡ್ಕತ್ತಿ ಮಣೆಯ ಸಂಗೀತ, ಚಳಿಯ ರಾತ್ರೀಲಿ ಅಡ್ಕೆ ಬೇಯ್ಸದು, ಮರುದಿನ ಅಡಿಕೆ ಸಿಪ್ಪೇಲಿ ಅಕಸ್ಮಾತ್ ಬಿದ್ದುಹೋಗಿರೋ ಅಡ್ಕೇನ ಹುಡ್ಕದು, ಸಿಪ್ಪೇನೆಲ್ಲ ಗುಡಿಸಿ ಚೊಕ್ ಮಾಡದು, ಬೆಂದ ಅಡಿಕೇನ ಅಟ್ಟಕ್ಕೆ ಒಯ್ದು ಚಾಪೆ ಮೇಲೆ ಹರ್ಗದು..... ನೋ ನೋ ನೋ, ಅಯಾಮ್ ಮಿಸ್ಸಿಂಗ್ ಸುಗ್ಗಿ. :( :( :(

Shashi jois said...

ಕೆಂಪು ಹರಿವೆ ಸೊಪ್ಪಿನ ಚಿತ್ರ ನೋಡಿ ಅಮ್ಮ ಮಾಡುತ್ತಿದ್ದ ಸೊಪ್ಪಿನ ಹುಳಿ ನೆನಪಾಯ್ತು.. ಚಿತ್ರಗಳನ್ನು ನೋಡಿ ಊರಿನ ನೆನಪಾಯ್ತು ..ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

Sir

wonderful

photogala soundaratege aksharaga ponisuvike hodnuttide

nenapina sanchy inda said...

nice pics
:-)
malathi S

V.R.BHAT said...

NICE PICTURES

V.R.BHAT said...

NICE PICTURES

Shanmukharaja M said...

@ ಸುಶ್ರುತ ದೊಡ್ಡೇರಿ:
ಹೌದು, ಬರೆದಷ್ಟು ಅಪೂರ್ಣ ಆಗುತ್ತಾ ಹೋಗುತ್ತೆ ಆ ಲಿಸ್ಟ್!

@Shashi jois,
ಈ ವೀಕೆಂಡ್ ಊರಗೆ ಹೋಗ್ತಾ ಇದ್ದೇನೆ, ಸರ್ವಂ ಹರಿವೆಮಯಂ ಗ್ಯಾರೆಂಟಿ!

@ ಸಾಗರದಾಚೆಯ ಇಂಚರ:
thank you!

@ nenapina sanchy inda:
thank you!

@ವಿ.ಆರ್.ಭಟ್:
thank you!

Archu said...

Good One!
cheers,
Archana