Friday, May 30, 2008

myHarate:"ನಗಬೇಕಾ? ಯಾಕೆ? ಹೇಗೆ?"

ಅದು ಯಾವಾಗ ತಾರೆ ಜಮೀನ್ ಪರ್ ಹಿಟ್ ಆಯಿತೋ ಅಂದಿಂದ ಈ Trend ಶುರುವಾಗಿದೆ. ಹಲ್ಲು ಎತ್ತರ ಇರೋ ಮಕ್ಕಳಿಗೆ ತುಂಬಾ ಬೇಡಿಕೆ! Advertisement ಇರಲಿ, ಹೊಸ Cinema ಇರಲಿ, Comedy Time ಇರಲಿ, ಇವರೇ ಬೇಕು. ಮನೆಯಲ್ಲಿ ಅಪ್ಪ ಅಮ್ಮ ಮಕ್ಕಳ ಹಲ್ಲು ಆಡುತ್ತಿದ್ದರೂ ಇರ್ಲಿ ಕಣೆ, ಸ್ವಲ್ಪ ಸಮಯ ಆದ ಮತ್ತೆ 'ಗೊಗ್ಗೆ' ಹಲ್ಲು ಬರುತ್ತೆ, ನನ್ನ ಮಗನೂ 'ಇಶಾನ್' ನಂತೆ film actor ಆಗ್ಬಹುದು ಅಂತಾ ಕುಶಿಯಲ್ಲಿ ಹೇಳ್ತಾ ಇದ್ದಾರೆ. ಅಲ್ಲಿ BDS ಮಾಡ್ಕೊಂಡು ನುಸಿ ಹೊಡೆಯೋ ಡಾಕ್ಟರ್-ಗಳ ಶಾಪ 'ತಾರೆ ಜಮೀನ್ ಪರ್' ಗೆ ಇದ್ದೆ ಇರುತ್ತೆ!

ನಮಗೆಲ್ಲ ಪ್ರಾಯ ಆಯ್ತು, ಯಾಕೆಂದ್ರೆ ಇನ್ನು ಹಲ್ಲು ಬಿದ್ದು ಹೋದೆರೆ 'ಗೊಗ್ಗೆ' ಹಲ್ಲು ಬರಲೇ ಬರದು. ಹಲ್ಲು ಬೀಳುವ ಸಮಯದಲ್ಲಿ ತಡೆಹಿಡಿದು actor ಆಗಬಹುದಿತ್ತೋ ಎನೋ!

ಒಂದಂತೂ ಖಂಡಿತಾ ಸತ್ಯ, ಹಲ್ಲು ಇದೆಯೋ ಇಲ್ಲವೋ ಎಂಬಂತೆ serious ಆಗಿ ದಿನವಿಡೀ ಕೂತುಕೊಳ್ಳುವವರಿಗಿಂತ ಈ ಹಲ್ಲೆತ್ತರದ ಹಸನ್ಮುಖಿಗಳು ಇಷ್ಟಟವಾಗುತ್ತಾರೆ. ಇವರಲ್ಲಿ ನಗು ಎಷ್ಟು ಸಹಜವಾಗಿರುವುದಲ್ಲವೆ?

ನಗೂ ನಗೂನ ಗೂನ ಗೂನ ಗೂನಗೂ ನಗೂ! - 'ಅರಮನೆ'ಯ ಒಂದು ಪದ್ಯ ಈ ರೀತಿ ಇದೆ! ಇದನ್ನು ಕೇಳಿಯೂ ನಗಬೇಕಾ?

Tuesday, May 27, 2008

myKavana:"ghar se nikalthe hi"

ಮನೆಯಿಂದ ಹೊರಟೆ ನಾನು
ತುಸು ದೂರದಲ್ಲಿ ನೀನು!
ಮಳೆಸುರಿಯುತಿರಲು ಭಾನು...

ಕೊಡೆಯೊಳಗೆ ಮರೆಯಾಗಿಹಳೊ?
ನಸುಕಿಂದ ಹಗಲೇ ಇರುಳೊ?
ಚಳಿಯಲ್ಲಿ ನನ್ನನೂ ಮರೆತಳೊ..

ಗಾಳೀಗೆ ಹನಿಯು.. ಮೈಯನ್ನ ಸೇರಿ!
ಧರೆಗಿಳಿದ ನೀರು ಕಾಲಲ್ಲಿ ಏರಿ!!
ಚಳಿಯಲ್ಲಿ ಮನಸು, ಅಪ್ಪುಗೆಯ ಕೋರಿ,
ಮುಳುಗುವುದೆ ಇಂದು ನಮ್ಮೂರ ಕೇರಿ!!!

ಮಳೆನಿಂತ ಮೇಲೆ.. ಮರದಲ್ಲಿ ಹೀಗೆ..
ಚಟಪಟನೆ ಮುತ್ತು ಧರೆಗಿಳಿದ ಹಾಗೆ!
ನಿನ್ನನ್ನು ನೆನೆದೆ, ಬಂದೊಮ್ಮೆ ಹೋಗೆ
ಎಲ್ಲೆಲ್ಲು ಇಂಪು ನಿನ್-ಹೆಸರ ಕೂಗೆ..!!

Sunday, May 25, 2008

myKavana:"ಪ್ರಿಯೆ"

ನಿನ್ನ ಅಂದ ಚಂದ ನೋಡೆ
ರೆಪ್ಪೆ ಕೆಲಸ ಮರೆಯಿತು...
ಮಾತೆ ಮೌನವಾಯಿತು...
ಹಸಿವೆ ಇಲ್ಲವಾಯಿತು...
ಕನಸ-ನನಸ ನೆನೆದು ಮನಸು
ಮತ್ತೆ ಮೆಲುಕ ಹಾಕಿತು...
ಎದೆಯ ಗೂಡ ಒಡೆದು ಇಂದು
ಹೃದಯ ನಿನ್ನ ಸೇರಿತು...

myPOD:"Weekend Photos"




myPOD:"ಪಾತರಗಿತ್ತಿ ಪಕ್ಕ"

ಏನು ಬಣ್ಣ ಬಣ್ಣ, ಆ.. ಆ.. ಆ..
ಏನು ಬಣ್ಣ ಬಣ್ಣಾ
ನಡುವೇ ನವಿಲ ಕಣ್ಣಾ
ರೇಶಿಮೆ ಹಾಗೆ ನಯ
ಮುಟ್ಟಲಾರೆ ಭಯ..

ಪಾತರಗಿತ್ತಿ ಪಕ್ಕ
ನೋಡಿದೇನ ಅಕ್ಕ..

ಪಾತರಗಿತ್ತಿ ಪಕ್ಕ
ನೋಡಿದೇನ ಅಕ್ಕ..

Thursday, May 22, 2008

myKavana:"ಪ್ರೀತಿಯ ವಚನಗಳು..."

*********
ಓ ದೇವಾ,

ನೀ ಕಣ್ಣು ಎರಡು ಕೊಟ್ಟೆ,
ಕಿವಿಯೆರಡು ಕೊಟ್ಟೆ,
ಹೃದಯ ಒಂದೇ ಕೊಟ್ಟೆ!
ಇನ್ನೊಂದ ನನಗೆ ಹುಡುಕಲು ಬಿಟ್ಟೆ!!

*********

ಪಿಸುಮಾತು - ಕಿಸ್ ಮಾತು!
ಕೋಪದ ಮಾತು - ಕಿವಿ ತೂತು!
ಮನದ ಮಾತು - ಮೌನವೆ ಇತ್ತು!
ಪ್ರೀತಿ ಮಾತು - ಅನುರಾಗ ಬಂತು!!!
*********

Wednesday, May 21, 2008

myKavana:"ವಿನಂತಿ"

ಒಲವೆ, ನನ್ನ ಮನವ ನೀ ಏಕೆ ಕಾಡುವೆ?
ಸುಮವೆ, ನೀ ಅರಳಿ ಮತ್ತೆ ಏಕೆ ಬಾಡುವೆ?
ನೀ ಅತ್ತಾಗ ಇತ್ತಕಡೆ ಬರಿಯ ಮೌನವೆ!
ನಗುವು... ಸತ್ತಾಗ ಎಲ್ಲೆಲ್ಲು ದುಗುಡ ದುಮ್ಮಾನವೆ...

ನಗುವಾ, ನಾವು ನಗುತಾ
ನೋವೆಲ್ಲಾ ಮರೆಯುತಾ
ಅನುದಿನವೂ, ಪ್ರೀತಿಯಾ
ಸವಿಯನ್ನು ಸವಿಯುತಾ

ಮಗುವಂತೆ ತಿರುಗಿಸಿ ಕತ್ತು,
ನೀ ಅತ್ತರೆ ಸಿಗುವುದೆ ಮುತ್ತು?
ಪ್ರತಿ ಪುಷ್ಪದಲೂ ತುಂಬಿರೆ ಸಿಹಿ
ದುಂಬಿಯ ಅಧರಕೆ ಎಲ್ಲಿದೆ ಕಹಿ?

Monday, May 19, 2008

myPOD:"ಹಣ್ಣುಕಾಯಿ"

ಸಾಲಿಗನ ಹಣ್ಣು - ಹಣ್ಣಿನ ಸುತ್ತ ಜೇಡರ ಬಲೆಯಂತಹಾ ಕವಚ ಇರುತ್ತದೆ! ತಿನ್ನಲು ಕೂಡ ಸಹ್ಯ!

myPOD:"ಹಪ್ಪಳ ಮತ್ತು ಸಾಂತಾಣಿ"

Tuesday, May 13, 2008

Monday, May 12, 2008

myHarate:"ಹಪ್ಪಳ ತಯಾರಿ"

ನಾನು ಮನೆಯ ಹಪ್ಪಳ ತಯಾರಿ ಕಾರ್ಯಕ್ರಮದ ಬಗ್ಗೆ ಬರೆಯದಿದ್ದರೆ ಎನನ್ನೋ ಮುಚ್ಚಿಟ್ಟುಕೊಂಡಂತೆಯೇ ಸರಿ. ಬೇಸಿಗೆ ರಜೆಯಲ್ಲಿ ಅಕ್ಕ ಮತ್ತು ಅವರ ಮಕ್ಕಳು ವಿಹರಿಸಲು ತವರು ಮನೆಗೆ ಬಂದರೆ ಅಮ್ಮಂದು ಒಂದೆ ಕೂಗು, ಹಪ್ಪಳ ಮಾಡ್ಲಾವುತಿತ್ತು! ಮೆಣಸಿನ ಸೆಂಡಿಗೆ, ಸಾಗು ಸೆಂಡಿಗೆ ಅಮ್ಮ ಮೊದಲೆ ತಯಾರು ಮಾಡಿಟ್ಟು ಹಪ್ಪಳದಂತ ದೊಡ್ಡ ಕೆಲಸಕ್ಕೆ ತಯಾರಾಗುತ್ತಾರೆ. ಇದಕ್ಕೆ resource ಜಾಸ್ತಿ ಬೇಕಿರುತ್ತೆ. ವರುಷಕ್ಕೆ 5000 ಕ್ಕೂ ಮಿಗಿಲಾಗಿ ಹಪ್ಪಳ ತಟ್ಟಲ್ಪಡುತ್ತದೆ. ಕೊನೆಗೊಮ್ಮೆ ಸಿಟಿ ಯಲ್ಲಿರುವ ಸಂಬಂದಿಗಳಿಗೆ ಅರೆವಾಶಿ ಬಿಟ್ಟಿಗೆ ಪ್ರೀತಿಯಿಂದ export ಆಗಿಬಿಡುತ್ತೆ. ಅವರು ಅಮ್ಮನ ಹೊಗಳಿ ಮತ್ತೆ ಕೆಲವು ಹಪ್ಪಳದ ಕಟ್ಟನ್ನೂ ವಸೂಲಿ ಮಾಡುತ್ತಾರೆ.

'ಹಪ್ಪಳದ ಹಲಸಿ'ನ ಮರಂದಲೆ ಬೆಳ್ಳಂಬೆಳಗ್ಗೆ ಡುಬ್ ಡುಬ್ ಅಂತ ಹತ್ತಾರು ಗುಜ್ಜೆ ಸಹಿತ ಧರೆಗುರುಳಿದ ಹಲಸಿನ ಕೈ ಮನೆಗೆ ತರುವುದು ದೊಡ್ಡ ಕೆಲಸ. ವರುಷಂದ ಸಾಕಿದ ನುಣುಪಾದ ತಲೆಗೂದಲಲ್ಲಿ ಬಿಳಿಯ ಮಯಣ ಎಲ್ಲಿ ಸೇರಿಬಿಡುವುದೊ ಎಂಬ ಹೆದರಿಕೆ. ಮುಳ್ಳಿನ ಮೈಯ ಹಲಸಿನ ಕೈ ಬರಿಗೈಯಲ್ಲಿ ತರುವಿದು ಕನಸಿನ ಸಂಗತಿಯೇ ಸರಿ. ಅವೆಲ್ಲ 'ಮಡು'ವಲ್ಲಿ ಒಂದು ಕ್ಷಣದಲ್ಲಿ ಹೊಟ್ಟೆ ಸೀಳಿ ಬಿದ್ದು ಕೊಳ್ಳುತ್ತವೆ. exam reuslt ತರ ಸೊಳೆ ಬೆಳೆದು ಹಳದಿ ಬಣ್ಣ ಬಂದಿದೆಯೊ ಅಂತ ಸುತ್ತಲೆಲ್ಲರಿದ್ದು ಪರಿವೀಕ್ಷಣೆ ನಡೆಯುತ್ತದೆ. ಎಲ್ಲ ಅಂದುಕೊಂಡಂತೆ ನಡೆದರೆ ಕೊಯಿದ ಅಣ್ಣನಿಗೆ ಮುಕ್ತಿ. ಇಲ್ಲಂದರೆ ಅಮ್ಮನ ಬೈಗಳು ಅವನ ಬಿಡದು!

ಅದನ್ನು ಕೊರೆದು, ಎಳಕ್ಕಿ, ಬೇಯಿಸಿ, ಕಡೆದು ಹಪ್ಪಳ ಕಾಯಕ ಶುರು ಮಾಡುವಾಗ ಬರೊಬರಿ 11 ಗಂಟೆ ದಾಟಿಬಿಡುವುದು. ಹಪ್ಪಳ ಮಾಡೋ ದಿನ ಊಟ ಶ್ರಾರ್ಧ ತರ 3ಗಂಟೆ ದಾಟುವುದು!

ಉಂಡೆ ಮಾಡುವವ, ಉಂಡೆ ಇಡುವವ, ಹಪ್ಪಳ ಒತ್ತುವವ, ಮಡಲ ತಟ್ಟಿಗೆ ಒಣಗಲು ಹಾಕಿಬಿಡುವ ಹೀಗೆ ಹಲವಾರು ಕಾಯಕಕ್ಕೆ expert ಮನೆಯಲ್ಲಿ ಇದ್ದೆ ಇರುತ್ತಾರೆ.

ಎಲ್ಲ ಸರಿ ಮುಗಿಸಿದಾಗ ಮಾಡಿದ ಹಪ್ಪಳದ ಮೇಲೆ ನಡೆದಾಡಿ ಬರುವ ಪುಟ್ಟ ಕಂದಮ್ಮಗಳು, ಹಿಟ್ಟ ತಿನ್ನಲು ಜೊಲ್ಲು ಸುರಿಸುತ್ತಾ ಕೂತ ಅಣ್ಣನ ಮಕ್ಕಳು, ಒಣಗಿದ ಹಪ್ಪಳ ಎತ್ತಲು ಬರುವ ಕಾಕಮ್ಮ ಗಳು, ಕೊನೆಗೊಮ್ಮೆ ಬಿಸಿ ಎಣ್ಣೆಗೆ ಬಿದ್ದ ಹಪ್ಪಳವ ತೆಂಗಿನಕಾಯಿ ತುರಿ ಜೊತೆ ತಿನ್ನುವುದು.. ಹುಹ್! ಹಪ್ಪಳದ ಮೋಜು ಅನುಭವಿಸಿಯೆ ಬರಬೇಕು.

ಹಪ್ಪಳ ಮಾಡಲು ಬಂದ ಅಕ್ಕಂದಿರಿಗೆ 2 ಕಟ್ಟು ಹಪ್ಪಳ ತಪ್ಪದೆ ಸಿಗುತ್ತೆ!

ಅಂದಹಾಗೆ ಈಗಿನ 2 ಜನ familyಯಲ್ಲಿ ಈ ವಿಚಾರ ಬರೀ ಕನಸಷ್ಟೆ!

ಅಮ್ಮ ಈ ಸಲ ಸ್ವಲ್ಪ ಕಂಗಾಲು. pancrease ನಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಂಡು ಸದ್ಯ ಸುದಾರಿಸಿಕೊಂಡರಸ್ಟೆ. ಸಿಹಿ, ಉಪ್ಪು, ಖಾರ, ಹುಳಿ ಎಲ್ಲ ಕಡಿಮೆ ತಿನ್ನಬೇಕಿದೆ. ಈ ಪತ್ಯ ಅಮ್ಮನ ಎಲ್ಲ ಆಸಕ್ತಿ ಕುಂದಿಸಿದೆ. ದೂರದಿಂದಲ್ಲೆ ಬರಿಯ ಹಪ್ಪಳ management ಮಡುತ್ತಿದ್ದಾರೆ ಅಷ್ಟೆ!

Sunday, May 11, 2008

myKavana:"ಅವಳಿಗಾಗಿ"

ಇಷ್ಟು ವರುಷಾ ಒಟ್ಟಿಗಿದ್ದು ನಿತ್ಯ ಬೆರೆತರೂ,
ಅರಿತೆವೇನೆ ನಾವು ನಮ್ಮ ಅಂತರಾಳವ?

ಸದಾ ನಿನ್ನ ಧ್ಯಾನದಲ್ಲೆ ನಾನು ಮುಳುಗಿದೆ,
ಇಂದು ಈಗ ದಾರಿ ಅರಿತು ಹ್ರುದಯ ಸೇರಿದೆ
ಎಷ್ಟು ಕಷ್ಟ ನಿನ್ನ ವಿನಹ, ನೀನು ಬೇಕಿದೆ
ನೂರು ಕಾಲ ನಿನ್ನ ಜೊತೆಗೆ ಬಾಳಬೇಕಿದೆ...

ಇಷ್ಟು ವರುಷಾ ಒಟ್ಟಿಗಿದ್ದು ನಿತ್ಯ ಬೆರೆತರೂ,
ಅರಿತೆವೇನೆ ನಾವು ನಮ್ಮ ಅಂತರಾಳವ?

ನಿನ್ನ ಮನಸು ಮಗುವಿನಂತೆ ಮಧುರವಾಗಿದೆ
ಮಧುವ ಹೀರಲೆಂದೆ ಒಂದು ದುಂಬಿ ಬಂದಿದೆ
ಕನಸ ತಿಳಿಸಿ ನನ್ನ ಮನಸು ಹಗುರವಾಗಿದೆ
ನಾವು ಬೇಗ ರೆಕ್ಕೆ ಬಿಚ್ಚಿ ಹಾರಬೇಕಿದೆ...

ಇಷ್ಟು ವರುಷಾ ಒಟ್ಟಿಗಿದ್ದು ನಿತ್ಯ ಬೆರೆತರೂ,
ಅರಿತೆವೇನೆ ನಾವು ನಮ್ಮ ಅಂತರಾಳವ?

ನಿನ್ನ ಮಾತು ನನ್ನ ಎದೆಯ ಗೆದ್ದು ಬಿಟ್ಟಿದೆ
ನನ್ನ ಒಡಲು ನಿನ್ನ ನೋಡೆ ಕಾದು ಕುಳಿತಿದೆ
ಎದೆಯ ಮಿಡಿತ ನಿನ್ನ ಇಹವ ಕೂಗಿ ಹೇಳಿದೆ
ಅದುವೆ ಕ್ಷಣಕೂ ಪುನಹ ಪುನಹ ಪ್ರೀತಿ ಮಾಡಿದೆ...

ಇಷ್ಟು ವರುಷಾ ಒಟ್ಟಿಗಿದ್ದು ನಿತ್ಯ ಬೆರೆತರೂ,
ಅರಿತೆವೇನೆ ನಾವು ನಮ್ಮ ಅಂತರಾಳವ?

ನಿನ್ನ ನೆನಪು ಮನವ ತುಂಬ ತುಂಬಿಕೊಂಡಿದೆ
ನಿನ್ನ ಮುತ್ತು ಮಾಸದಿರಲು ವಿರಹವೆಲ್ಲಿದೆ!
ನಿನ್ನ ಮುದ್ದು ಕೆನ್ನೆ ಇಂದು ನನ್ನ ಕಾಡಿದೆ
ನಮ್ಮ ಬದುಕು ಹೀಗೆ ಎಂದೂ ಇರಲೇ ಬೇಕಿದೆ!!!!

ಇಷ್ಟು ವರುಷಾ ಒಟ್ಟಿಗಿದ್ದು ನಿತ್ಯ ಬೆರೆತರೂ,
ಅರಿತೆವೇನೆ ನಾವು ನಮ್ಮ ಅಂತರಾಳವ?

Thursday, May 8, 2008

myKavana:"ಅಕ್ಷಯ ತೃತೀಯ"

ಕೇಳಬೇಕೆ ಅವಳು ನನ್ನ
ಬಂದಿದೀಗ ಹಬ್ಬ ಹೊನ್ನ
ಇಂದು ಅಲ್ಲವೆ ಅಕ್ಷಯ ತೃತೀಯ!
ನೀನು ನಂಗೇನ್ ತರ್-ತೀಯ?

Saturday, May 3, 2008

myKavana:"ಕೈಬಿಡದಿರು ಎಂದಿಗೂ!"

ಪ್ರೀತಿಸುವೆ ನಾ ಅನವರತ
ಏನನು ಬಯಸದೆ ಹೀಗೆ
ಕಾಯುವೆನು ನಾ ದಿನನಿತ್ಯ
ಕಣ್ಣಿನರೆಪ್ಪೆಯ ಹಾಗೆ
ನೀ ನನ್ನ.. ಬರಸೆಳೆದು.. ಕೈಬಿಡದಿರು ಎಂದಿಗೂ...

ಹಂಬಲದ ಕನಸುಗಳೆ
ನೀವೆಲ್ಲ ಹೊರಟುಬಿಡಿ
ಅವಳಿಂದ ಎಲ್ಲವು
ನನಸಾಗ ಬೇಕಿದೆ
ಅನುರಾಗ.. ಮನದಲ್ಲಿ.. ಮಾತು ಬರದೆ ಹೋಗಿದೆ...

ಅಕಾಶದ ತಾರೆಯು
ಭುವಿಗಿಳಿದ ಹಾಗಿದೆ
ನನ್ನೂರ ಕೇರಿಯಲಿ
ಇರುಳೆ ಹಗಲು ಆಗಿದೆ
ನಿಶೆಯೆಲ್ಲಿ? ಹಸೆಯಾಕೆ? ನಶೆಯೊಂದೆ ಉಳಿದಿದೆ...

myPOD:"ನನ್ನ ಪ್ರೀತಿಗೆ.. ಅದರ ರೀತಿಗೆ.. ಹೂವ ಚಂದವೆ ಸಾಕ್ಷಿಯು!"