Monday, May 12, 2008

myHarate:"ಹಪ್ಪಳ ತಯಾರಿ"

ನಾನು ಮನೆಯ ಹಪ್ಪಳ ತಯಾರಿ ಕಾರ್ಯಕ್ರಮದ ಬಗ್ಗೆ ಬರೆಯದಿದ್ದರೆ ಎನನ್ನೋ ಮುಚ್ಚಿಟ್ಟುಕೊಂಡಂತೆಯೇ ಸರಿ. ಬೇಸಿಗೆ ರಜೆಯಲ್ಲಿ ಅಕ್ಕ ಮತ್ತು ಅವರ ಮಕ್ಕಳು ವಿಹರಿಸಲು ತವರು ಮನೆಗೆ ಬಂದರೆ ಅಮ್ಮಂದು ಒಂದೆ ಕೂಗು, ಹಪ್ಪಳ ಮಾಡ್ಲಾವುತಿತ್ತು! ಮೆಣಸಿನ ಸೆಂಡಿಗೆ, ಸಾಗು ಸೆಂಡಿಗೆ ಅಮ್ಮ ಮೊದಲೆ ತಯಾರು ಮಾಡಿಟ್ಟು ಹಪ್ಪಳದಂತ ದೊಡ್ಡ ಕೆಲಸಕ್ಕೆ ತಯಾರಾಗುತ್ತಾರೆ. ಇದಕ್ಕೆ resource ಜಾಸ್ತಿ ಬೇಕಿರುತ್ತೆ. ವರುಷಕ್ಕೆ 5000 ಕ್ಕೂ ಮಿಗಿಲಾಗಿ ಹಪ್ಪಳ ತಟ್ಟಲ್ಪಡುತ್ತದೆ. ಕೊನೆಗೊಮ್ಮೆ ಸಿಟಿ ಯಲ್ಲಿರುವ ಸಂಬಂದಿಗಳಿಗೆ ಅರೆವಾಶಿ ಬಿಟ್ಟಿಗೆ ಪ್ರೀತಿಯಿಂದ export ಆಗಿಬಿಡುತ್ತೆ. ಅವರು ಅಮ್ಮನ ಹೊಗಳಿ ಮತ್ತೆ ಕೆಲವು ಹಪ್ಪಳದ ಕಟ್ಟನ್ನೂ ವಸೂಲಿ ಮಾಡುತ್ತಾರೆ.

'ಹಪ್ಪಳದ ಹಲಸಿ'ನ ಮರಂದಲೆ ಬೆಳ್ಳಂಬೆಳಗ್ಗೆ ಡುಬ್ ಡುಬ್ ಅಂತ ಹತ್ತಾರು ಗುಜ್ಜೆ ಸಹಿತ ಧರೆಗುರುಳಿದ ಹಲಸಿನ ಕೈ ಮನೆಗೆ ತರುವುದು ದೊಡ್ಡ ಕೆಲಸ. ವರುಷಂದ ಸಾಕಿದ ನುಣುಪಾದ ತಲೆಗೂದಲಲ್ಲಿ ಬಿಳಿಯ ಮಯಣ ಎಲ್ಲಿ ಸೇರಿಬಿಡುವುದೊ ಎಂಬ ಹೆದರಿಕೆ. ಮುಳ್ಳಿನ ಮೈಯ ಹಲಸಿನ ಕೈ ಬರಿಗೈಯಲ್ಲಿ ತರುವಿದು ಕನಸಿನ ಸಂಗತಿಯೇ ಸರಿ. ಅವೆಲ್ಲ 'ಮಡು'ವಲ್ಲಿ ಒಂದು ಕ್ಷಣದಲ್ಲಿ ಹೊಟ್ಟೆ ಸೀಳಿ ಬಿದ್ದು ಕೊಳ್ಳುತ್ತವೆ. exam reuslt ತರ ಸೊಳೆ ಬೆಳೆದು ಹಳದಿ ಬಣ್ಣ ಬಂದಿದೆಯೊ ಅಂತ ಸುತ್ತಲೆಲ್ಲರಿದ್ದು ಪರಿವೀಕ್ಷಣೆ ನಡೆಯುತ್ತದೆ. ಎಲ್ಲ ಅಂದುಕೊಂಡಂತೆ ನಡೆದರೆ ಕೊಯಿದ ಅಣ್ಣನಿಗೆ ಮುಕ್ತಿ. ಇಲ್ಲಂದರೆ ಅಮ್ಮನ ಬೈಗಳು ಅವನ ಬಿಡದು!

ಅದನ್ನು ಕೊರೆದು, ಎಳಕ್ಕಿ, ಬೇಯಿಸಿ, ಕಡೆದು ಹಪ್ಪಳ ಕಾಯಕ ಶುರು ಮಾಡುವಾಗ ಬರೊಬರಿ 11 ಗಂಟೆ ದಾಟಿಬಿಡುವುದು. ಹಪ್ಪಳ ಮಾಡೋ ದಿನ ಊಟ ಶ್ರಾರ್ಧ ತರ 3ಗಂಟೆ ದಾಟುವುದು!

ಉಂಡೆ ಮಾಡುವವ, ಉಂಡೆ ಇಡುವವ, ಹಪ್ಪಳ ಒತ್ತುವವ, ಮಡಲ ತಟ್ಟಿಗೆ ಒಣಗಲು ಹಾಕಿಬಿಡುವ ಹೀಗೆ ಹಲವಾರು ಕಾಯಕಕ್ಕೆ expert ಮನೆಯಲ್ಲಿ ಇದ್ದೆ ಇರುತ್ತಾರೆ.

ಎಲ್ಲ ಸರಿ ಮುಗಿಸಿದಾಗ ಮಾಡಿದ ಹಪ್ಪಳದ ಮೇಲೆ ನಡೆದಾಡಿ ಬರುವ ಪುಟ್ಟ ಕಂದಮ್ಮಗಳು, ಹಿಟ್ಟ ತಿನ್ನಲು ಜೊಲ್ಲು ಸುರಿಸುತ್ತಾ ಕೂತ ಅಣ್ಣನ ಮಕ್ಕಳು, ಒಣಗಿದ ಹಪ್ಪಳ ಎತ್ತಲು ಬರುವ ಕಾಕಮ್ಮ ಗಳು, ಕೊನೆಗೊಮ್ಮೆ ಬಿಸಿ ಎಣ್ಣೆಗೆ ಬಿದ್ದ ಹಪ್ಪಳವ ತೆಂಗಿನಕಾಯಿ ತುರಿ ಜೊತೆ ತಿನ್ನುವುದು.. ಹುಹ್! ಹಪ್ಪಳದ ಮೋಜು ಅನುಭವಿಸಿಯೆ ಬರಬೇಕು.

ಹಪ್ಪಳ ಮಾಡಲು ಬಂದ ಅಕ್ಕಂದಿರಿಗೆ 2 ಕಟ್ಟು ಹಪ್ಪಳ ತಪ್ಪದೆ ಸಿಗುತ್ತೆ!

ಅಂದಹಾಗೆ ಈಗಿನ 2 ಜನ familyಯಲ್ಲಿ ಈ ವಿಚಾರ ಬರೀ ಕನಸಷ್ಟೆ!

ಅಮ್ಮ ಈ ಸಲ ಸ್ವಲ್ಪ ಕಂಗಾಲು. pancrease ನಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಂಡು ಸದ್ಯ ಸುದಾರಿಸಿಕೊಂಡರಸ್ಟೆ. ಸಿಹಿ, ಉಪ್ಪು, ಖಾರ, ಹುಳಿ ಎಲ್ಲ ಕಡಿಮೆ ತಿನ್ನಬೇಕಿದೆ. ಈ ಪತ್ಯ ಅಮ್ಮನ ಎಲ್ಲ ಆಸಕ್ತಿ ಕುಂದಿಸಿದೆ. ದೂರದಿಂದಲ್ಲೆ ಬರಿಯ ಹಪ್ಪಳ management ಮಡುತ್ತಿದ್ದಾರೆ ಅಷ್ಟೆ!

4 comments:

Anonymous said...

Odi Happala tindaste kushi ayithu...
Thumba chennagi bariteera...

ಪುಟ್ಟ PUTTA said...

Happala thindaste khushi aythu :)

ಬಾನಾಡಿ said...

ಅಮ್ಮನಂಥ ಒಂದು ತಲೆಮಾರು ಮುಗಿದ ಮೇಲೆ ಹಪ್ಪಳದಲ್ಲಿ ಹುಗಿದಿರೋ ಮಮತೆ, ಪ್ರೀತಿ ಅಂಗಡಿಯಿಂದ ತಂದು ಸೂಟ್ ಕೇಸ್ ನಲ್ಲಿ ಹಾಕಿ ನಮ್ಮ ನಮ್ಮ ನಗರಗಳಿಗೆ ಕೊಂಡೊಯ್ಯುವಾಗ ಸಿಗಲಾರದು. ಹಲಸಿನ ಕಾಯಿಯನ್ನು ಧರೆಗುರುಳಿಸುವಲ್ಲಿಂದ ಹಪ್ಪಳದ ಕಟ್ಟುಗಳನ್ನು ಮಾಡಿ ಇದು ಅವರಿಗೆ, ಇದು ಇವರಿಗೆ ಎಂದು (ಉಚಿತವಾಗಿ)ಪ್ರಿತಿಯಿಂದ ಹಂಚುವವರೆಗೆ ಇದೊಂದು ದೊಡ್ಡ 'Event' ಆಗಿರುತ್ತದೆ. ಉತ್ತಮ ಬರಹ.
ಅಭಿನಂದನೆಗಳು.
ಬಾನಾಡಿ

Shanmukharaja M said...

ಪುಟ್ಟ ಮತ್ತು ಲೋಕಿ,

ಮನೆಗೆ ಬಂದಾಗ ತಪ್ಪದೆ ಹಪ್ಪಳ ಹುರಿದು ತೆಂಗಿನಕಾಯಿ ಜೊತೆ ಕೊಡುತ್ತೇನೆ!

ಬಾನಾಡಿ,

ಎಷ್ಟು ನಿಜವಲ್ಲವೆ?
ಅಮ್ಮನ ಪ್ರೀತಿಗೆ ಅಮ್ಮನೆ ಸಾಟಿ, ಹೋಲಿಕೆ ಯಾರಿಲ್ಲ!