Monday, August 13, 2007

myHarate:"ಹುಡು-ಕಾಟ"

weekend ನಲ್ಲಿ ನನ್ನ ಗೆಳೆಯನೊಬ್ಬನ ಮುಖ್ಯ ಕೆಲಸ ಇಸ್ಪೀಟ್ ಎಲೆ ಕಲಸುವುದು! ನಾನು ಈ 52 cardgaLa ಬಗ್ಗೆ ಮತಾಡುತ್ತಿಲ್ಲ.. ಅವನಿಗೆ ಬಂದ ಕುಂಡಲಿ ಅಥವಾ ಜಾತಕದ ಬಗ್ಗೆ ಹೇಳುತಿದ್ದೆನೆ ಅಷ್ಟೆ. ಸಮಸ್ಯೆ ಎಂದರೆ, ಮೊದಲು ಎಲ್ಲರಿಗು ಕಾಣುವುದು ಜೊಕರ್! ಮತ್ತೆ ಇರೊ ನಾಲ್ಕು ರಾಣಿಯರಲ್ಲಿ ಯಾವ color ಬೇಕು ಅಂತ ಬೇರೆ ಚಿಂತೆ.ಕೆಲವು ಎಕ್ಕನಷ್ಟು ಉದ್ದ.. ಹುಹ್.. ಅದು ದೊಡ್ಡ ಕೆಲಸವೆ ಸರಿ. ಆಡೊ ಕಳದಲ್ಲಿ ಆತನ ತಾಯಿ ತಂದೆ ಎಲ್ಲ ಇರುತ್ತಾರೆ. ಜೊಕರ್ ಕಂಡಕೂಡಲೆ ಅಮ್ಮನಿಗೆ ಭಾರಿ ಕುಶಿ, ಮಗ, ನಿನ್ಗೆ ಇದೆ ಬೆಸ್ಟ್ ಕಾಣ ಅಂತ. ಮಗನಿಗೆ ಎಳ್ಳಷ್ಟೂ ಇಷ್ಟ ಇಲ್ಲ. ಆಮ್ಮ, ಒಮ್ಮೆ ಮದ್ವೆ ಆದ್ರೆ ಜೀವನ ಪೂರ್ತಿ ಅವಳೊಟ್ಟಿಗೆ ಇರಬೇಕಲ್ವ(ಹುಡುಗನಿಗೆ ಎಲೆ ಮತ್ತೆ ಕಲಸಬೇಕೆಂಬ ಹಂಬಲ) ಎಂಬ ಸೆಂಟಿಮೆಂಟ್ ತಂದು ತಾಯಿನ ಸಮಧಾನ ಪಡಿಸ್ತಾನೆ. ತಾಯಿಗೆ ಗತಕಾಲದ flashback ನೆನಪಾಗಿ, ತಾನು ನೊಡಿದ ಮೊದಲ ಹುಡುಗನ ದಿಟ್ಟತನದಿಂದ ತಿರಸ್ಕರಿಸಿದ್ದು ನೆನಪಾಗಿ ಅಯ್ತು ಮಗ, ನಿಂಗೆ ಬೇಡ ಇದು ಅಂತಾಳೆ. ಹಮ್, ಜೊಕರ್ ಬೆರೆ ಕೈಗೆ ಪಾಸ್ ಮಾಡಿ ಅಯ್ತು. next ಕರಿ ರಾಣಿ ಬಂದಿದ್ದಾಳೆ, ಹುಡುಗನಿಗೆ ನೋಡಿ ಕುಶಿ ಆಗಿದೆ, ಆದರೆ ಅವನ ಅಪ್ಪನಿಗೆ ಕುಶಿ ಇಲ್ಲ. ಚಂದದ ಹುಡುಗಿ ತನ್ನ flashback ನಲ್ಲಿ ನೊಡಿದ ಸಹಸ್ರಾರು ಹುಡುಗಿಯರ ಅಪ್ಪನ experiment ನಲ್ಲಿ reject ಆಗಬೇಕೆ! ಹುಡುಗ ಆಡೊದನ್ನೆ ನಿಲ್ಲಿಸೊ ತೀರ್ಮನ ತೆಗೆದುಕೊಳ್ಳೊ ಆಲೊಚನೆ ಮಾಡುತ್ತಿರುವಾಗಲೆ ಅಪ್ಪನ ಕೈಯಲ್ಲಿ ಕೆಂಪಾದ ಆಟೀನು ರಾಣಿ ಕಂಡಿತು. ಅಪ್ಪ ಮಗ ಸಂತೊಷದಲ್ಲಿ ನಗುತ್ತಿರಬೇಕಿರೆ, ಭಾವಿ ಅತ್ತೆ alias ಅಮ್ಮನದು ಒಂದೆ ರಾಗ, ಅದರ ನವಗೆ ಹೇಳಿದಾಂಗೆ ಕೆಳಿಸಲೆ ಸಾದ್ಯ ಇಲ್ಲೆ, ಆಟೀನು ರಾಣಿಯ ತುಟಿ ನೊಡು, ಹುಹ್. ನವಗೆ ಇದು ಆಗ್ಲಿಕಿಲ್ಲ ಎಂಬ ಒಂದೆ ನುಡಿ. ಮಗನ ಒಂದು ಸೆಂಟಿಮೆಂಟು ಮತ್ತೆ, ಹೀಗೆ ಹುಡುಕಿಕೊಂಡು ಇದ್ದರೆ, ನಾನು ಮದೆವೆಯೆ ಆಗೊದಿಲ್ಲ ಅಂತಾನೆ, ನಾಳೆ ಹುಟ್ಟೊ ಪಿಳ್ಳೆ ನೊಡಬೇಕೆಂಬ ಹಂಬಲ ಅಮ್ಮಂದು, ಕೊನೆಗೆ ಅಮ್ಮನ ಒಪ್ಪಿಗೆ ಕೂಡಾ ಸಿಗುತ್ತದೆ.. ಇಷ್ಟೆಲ್ಲ ಆಗಿ ಉಪ್ಪಿಟ್ಟು ಅವಲಕ್ಕಿ ತಿನ್ನಲು ಆಟೀನು ರಾಣಿ ಮನೆಗೆ ಹೊಗುವಾಗ ಆಕೆಗೆ ಆತನ ಮೇಲೆ ತಿರಸ್ಕಾರ!

ಮದ್ವೆ ಆಗೋದು ಮನೆಕಟ್ಟಿದ ಹಾಗೆ, ಅಷ್ಟು ಸುಲಭ ಅಲ್ಲ ಅಲ್ವೆ?

card pack change ಆಗಿದೆ, ಆಟೀನು ರಾಣಿಗೆ ಹುಡುಕಾಟ ನಡೆಯುತ್ತಲೆ ಇದೆ! ನಿಮಗೆ ಸಿಕ್ಕರೆ ದಯವಿಟ್ಟು ತಿಳಿಸಿ!

2 comments:

Anonymous said...

Just superb.......

Anonymous said...
This comment has been removed by a blog administrator.