Thursday, January 6, 2011

myKavana:"ಮಾಮರ ಕೂಗು!"

ರಸ್ತೆ ಅಗಲೀಕರಣ ನೆಪದಲ್ಲಿ ಸಂತೆಕಟ್ಟೆ ರಸ್ತೆ ಸುತ್ತ ಹೂಬಿಟ್ಟ 'ಕಾಡು ಮಾವಿನಮರ' ಉರುಳುತ್ತ ನೆನಪಿಸಿದ್ದು ಬರೀ ನೋವು. ಇದೇ ಈ 'ಮಾಮರ ಕೂಗು'.

ನೂರಾರು ವರುಷದ ಕನಸಲ್ಲವೇನು
ನೋಡಬೇಕಿದೆ ನಾನೂ ಹೊಸ ರಸ್ತೆಯನ್ನು
ಸಂತಸದಿ ಚಳಿಯಲ್ಲಿ ಹೂಬಿಟ್ಟೆ ನಾನು
ಕೊಡಲಿ ಏಟೇಕೆ ಬರಿ ಸ್ವಾರ್ಥಿ ನೀನು!

ನಾನೀಗ ಹೂಬಿಟ್ಟೆ ನಿಮಗಾಗಿ ತಾನೆ!
ಜಾಗವನು ಬಿಡಬೇಕೆ ನಿಮ್ಮಾಜ್ಞೆ ಏನೆ?
ನನ್ನ ಸಂತತಿ ಇಲ್ಲಿ ಬರಲಾರರಿನ್ನು
ತಗೋ ನಿಮ್ಮ ಕುಲಕೆ ಈ ಹಿಡಿಶಾಪವನ್ನು!

ಸಹಿಸಿದೆ ಹಗಲಿರುಳ ವಾಹನದ ಅಬ್ಬರ
ಹಗಲಿನಲಿ ನೆರಳಾದೆ ಹಾಕಿ ಎಲೆ ಚಪ್ಪರ
ತಂಗಾಳಿ ಸಿಹಿಗಾಳಿ ಬೇಕೆ ನಿನಗೆ?
ನನ್ನಂತೆ ಮರಣವೆ ಕೊನೆಗೆ ನಿನಗೆ

5 comments:

Shreekanth said...

Good one bhavayyo...

Shanmukharaja M said...

Thanks Shreekantha:-)

Unknown said...

shanmuga ,kavana thumba layaka iddu,neenu olle kavanagara appalaku,idu modala kavanava entha??????.

M.Bhat said...

Wodi artha aatu heli gresutttaa idde. :-)
The sorrow is pretty graphic. Nice, indeed!

Shanthan KB said...

Bahala chennagi moodibandide... ee koogu maragala kadiyuvavarannoo talupali endu ashisuttene.