Friday, July 9, 2010

myHarate:"ಹೀಗೂ ಉಂಟೆ?"

ದಿನ ದಿನದಂತಿಲ್ಲ, ದಿನಕಳೆದಂತೆ ಎಲ್ಲವೂ ಬದಲು.

ನಾನು ಚಿಕ್ಕವಾಗಿದ್ದಾಗ ನಮ್ಮೂರಿಗಿ ಒಬ್ಬನೇ ಒಬ್ಬ ಡಾಕ್ಟ್ರ. ಅದೂ ದೊಡ್ಡ ಆಸ್ಪತ್ರೆಗೆ ನಾಲಾಯಕ್ ಆದ ಡಾಕ್ಟ್ರ. ಆದರೂ ಎಷ್ಟೋ ಜನರ ರೋಗವನ್ನ ಆತ ಬರೀ ಸ್ಟೆತೊಸ್ಕೋಪ್ ಹಿಡಕೊಂಡು ಪತ್ತೆ ಹಚ್ಚಿ, ಮದ್ದು ಕೊಟ್ಟು ಹೋಗು ಎಂದರೆ ಆ ರೋಗ ಹೋದಂತೆಯೆ. ಅವರು ಎಲ್ಲವನ್ನ ರೋಗಿಗೆ ತಿಳಿಹೇಳುವ ಪರಿಯೋ ಅದ್ಭುತ! ಮತ್ತೆ ಅಲ್ಲಿಗೆ ಬರಲು ಮುಂದಿನ ಮಳೆಗಾಲದ ಮೊದಲ ಮಳೆಗೆ ಶೀತ ಜ್ವರ ಹಿಡಿಯಬೇಕು. ಅವರು ಕೊಟ್ಟ ಕುಪ್ಪಿ ಔಷದಿ ಪಕ್ಕದ ಮನೆಯವರಿಗೂ ಕೆಲವೊಮ್ಮೆ ಕೊಟ್ಟು ಕೆಲವರ ರೋಗ ಶಮನಮಾಡಿದ್ದೂ ಇದೆ!

ಆದರೆ ಈಗ ನೋಡಿ...

ಈಗಿನ MBBS, MD, **** ಡಾಕ್ಟ್ರನ್ನಂತೂ ಬಿಡಿ, ನಾಲ್ಕಾರು ಟೆಸ್ಟ್ ಮಾಡದೆ, ಟೆಸ್ಟ್ ಮಾಡಿದವ ಬರೆದ ರೆಪೊರ್ಟ್ ನೋಡದೆ ಔಷದಿ ಕೊಡುವ(ಕೊಡು ಅಲ್ಲ, ಬರೆ!ವಂತಿಲ್ಲ). ಕೆಲವೊಮ್ಮೆ ಯಾವ ಟೆಸ್ಟು ಯಾಕೋ ಗೊತ್ತಿಲ್ಲ. ನಿಜವಾದ ಡಾಕ್ಟ್ರು ಡಾಕ್ಟ್ರಾ ಅಲ್ಲಾ ಲಾಬ್ ಅಟ್ಟೆಂಡರಾ ದೇವನೇ ಬಲ್ಲ. ಅಸ್ಟಾಗಿಯೂ ರೋಗ ಸುತಾರಾಂ 3-4 ಸಲ ಡಾಕ್ಟ್ರ ಭೇಟಿವರೆಗೆ ಬಿಟ್ಟು ಹೋಗಲ್ಲ! ಎಂತಹಾ ವಿಪರ್ಯಾಸ ನೋಡಿ.

ಇದನ್ನೆಲ್ಲ ಗಮನಿಸುವಾಗ ನಮ್ಮಲ್ಲಿ ಉಳಿಯುವ ಪ್ರಶ್ನೆ: ಹೀಗೂ ಉಂಟೆ?