Tuesday, February 15, 2011

myPOD:"ಜರ್ಮನ್ ವೈಭವ"















Thursday, January 6, 2011

myKavana:"ಮಾಮರ ಕೂಗು!"

ರಸ್ತೆ ಅಗಲೀಕರಣ ನೆಪದಲ್ಲಿ ಸಂತೆಕಟ್ಟೆ ರಸ್ತೆ ಸುತ್ತ ಹೂಬಿಟ್ಟ 'ಕಾಡು ಮಾವಿನಮರ' ಉರುಳುತ್ತ ನೆನಪಿಸಿದ್ದು ಬರೀ ನೋವು. ಇದೇ ಈ 'ಮಾಮರ ಕೂಗು'.

ನೂರಾರು ವರುಷದ ಕನಸಲ್ಲವೇನು
ನೋಡಬೇಕಿದೆ ನಾನೂ ಹೊಸ ರಸ್ತೆಯನ್ನು
ಸಂತಸದಿ ಚಳಿಯಲ್ಲಿ ಹೂಬಿಟ್ಟೆ ನಾನು
ಕೊಡಲಿ ಏಟೇಕೆ ಬರಿ ಸ್ವಾರ್ಥಿ ನೀನು!

ನಾನೀಗ ಹೂಬಿಟ್ಟೆ ನಿಮಗಾಗಿ ತಾನೆ!
ಜಾಗವನು ಬಿಡಬೇಕೆ ನಿಮ್ಮಾಜ್ಞೆ ಏನೆ?
ನನ್ನ ಸಂತತಿ ಇಲ್ಲಿ ಬರಲಾರರಿನ್ನು
ತಗೋ ನಿಮ್ಮ ಕುಲಕೆ ಈ ಹಿಡಿಶಾಪವನ್ನು!

ಸಹಿಸಿದೆ ಹಗಲಿರುಳ ವಾಹನದ ಅಬ್ಬರ
ಹಗಲಿನಲಿ ನೆರಳಾದೆ ಹಾಕಿ ಎಲೆ ಚಪ್ಪರ
ತಂಗಾಳಿ ಸಿಹಿಗಾಳಿ ಬೇಕೆ ನಿನಗೆ?
ನನ್ನಂತೆ ಮರಣವೆ ಕೊನೆಗೆ ನಿನಗೆ

Wednesday, December 29, 2010

myKavana:"ಹತ್ತು ಉರುಳುವ ವೇಳೆ ಹೀಗೊಂದು ಆಶಯ"

ಹೊತ್ತು ಸಾವಿರ ನೆನಪು
ಹತ್ತು ಮುಳುಗುತಲಿಹುದು

ಕಂಡ ಕನವರಿಕೆಯಲಿ
ಕೆಲವಷ್ಟೆ ನನಸು
ಬರುವ ವರುಷದಿ ಎಲ್ಲ
ನನಸಿಗೆ ಕನಸು!

ಹಾಗಲದ ಪಲ್ಯದಲಿ
ಸಿಹಿಯಿರಲಿ ಕಹಿಯಿರಲಿ
ಬದುಕ ಬಂಡಿಯಲೆಂದು
ಪಯಣವಿರಲಿ

ನಾಲಗೆಗೆ ರುಚಿಯಿರಲು
ಕಹಿಯನ್ನು ಸವಿಯುವೆವು
ಮಧುಮೇಹಿಗಳಿಗೆ
ಸಿಹಿಯೆಂದರೇನೋ!

ನಾ ತುಳಿವ ದಾರಿಯಲಿ
ಕಲ್ಲಿರಲಿ ಮುಳ್ಳಿರಲಿ
ನನ್ನ ನಡೆ ಅನುಸರಿಪ
ಜನ ಮಾತ್ರ ಇರಲಿ!

ತಲೆ ಬಿಳಿಯಾಗಲಿ
ಹಳಿ ಕವಲೊಡೆಯಲಿ
ಬಾಳ ಪಯಣದಿ
ಮನವು ಮುದಿಯಾಗದಿರಲಿ

"ಹೊಸ ವರುಷ ಎಲ್ಲರಿಗು ತರಲಿ ಹರುಷ"

Monday, December 27, 2010

myPOD:"ಅಳಿಯದ ಚಿತ್ರಗಳು - 2"

ಮಧೂರು ಗಣಪತಿ ದೇವಸ್ಥಾನ





Tuesday, December 21, 2010

myKavana:"ಬೆಳಕು"

ಇಳಿದು ಬಾ ಬೆಳಕೆ ಇಳಿದು ಬಾ
ಇಳಿದು ಬಾ ಬೆಳಕೆ ಇಳಿದು ಬಾ

ಮೋಡದೆಡೆಯಿಂದ, ಚಂದ್ರನೆದುರಿಂದ
ಹೊನ್ನತೇರಿನಲಿ ಇಳಿದುಬಾ
ಮನದ ಇರುಳನ್ನು, ಭುವಿಯ ಚಳಿಯನ್ನು
ನೀನು ಬಂದಿಳಿದು ನೀಗು ಬಾ

ಜೀವ ಸಂಕುಲಕೆ, ಕೋಟಿ ಹಸುರಿಗೆ
ಜೀವಕಳೆಯನ್ನು ನೀಡು ಬಾ
ಇಳಿದು ಬಾ ಬೆಳಕೆ ಇಳಿದು ಬಾ
ಇಳಿದು ಬಾ ಬೆಳಕೆ ಇಳಿದು ಬಾ


myPOD: "ಬೆಳಕು: ನಮ್ಮನೆ ತೋಟದಲಿ ರವಿವಾರ ಬೆಳಗ್ಗೆ ಕಂಡಂತೆ"