ಕಣ್ಣೀರಿಗೆ ಕಲರಿಲ್ಲ!
ಧನ್ಯವಾದ ದೇವರೆ!
ಒಂದುವೇಳೆ ಇದ್ದರೆ
ಮುಖವೆಲ್ಲ ಬಣ್ಣದಿ
ನೆನೆಯುತ್ತಿತ್ತು ಮಕ್ಕಳ !
ಮೋಡಗಳು ಮಳೆಗೆರೆದು
ನೋವ ತಂಪುಗೈದರೂ!
ನೆರೆಯವರಿಗೆ ತಿಳಿಯುತ್ತಿತ್ತು
ಮಳೆಯಲ್ಲಿ ಅತ್ತರೂ!
ಮುಖದ ಬಣ್ಣ ಬದಲುತ್ತಿತ್ತು
ಅತ್ತು ಅತ್ತು ಹುಡುಗಿಗೆ!
ವಿರಸದಿ ಸಮಯವೆಲ್ಲಾ
ಮುಗಿಯುತ್ತಿತ್ತು ಮೇಕಪ್ಪಿಗೆ!
'ಹುಡುಗರು ಕೂಗರು' ಮಾತು
ಸುಳ್ಳಾಗುತ್ತಿತ್ತು ನಕ್ಕರೂ!
ಸಾಕಾಗುತ್ತಿತ್ತು 'ಹೋಳಿ'ಗೂ
ನಗುತ್ತಾ ನಗುತ್ತಾ ಅತ್ತರೂ!
ಆದರ್ಶ ದಂಪತಿಗಳ
ಗುಟ್ಟು ರಟ್ಟಾಗುತಿತ್ತು
ಅಜ್ಜಿಯ ಬತ್ತಿದ ಕಣ್ಣೂ
ಕಲರಾಗುತಿತ್ತೋ ಏನೋ!
Friday, December 2, 2011
Subscribe to:
Post Comments (Atom)
No comments:
Post a Comment