Sunday, December 25, 2011

myKavana:"ಪ್ರೀತಿ"

ಪ್ರೀತಿಯೆಂದರೇನೇ ಗೆಳತಿ
ನಿನ್ನ ಮೊದಲ ಭೇಟಿಯಾ?
ನಿನ್ನ ನೋಡಿ ನನ್ನದೆಂದು
ಅನಿಸಿಕೊಂಡ ರೀತಿಯಾ!

ಪ್ರೀತಿಯೆಂದರೇನು ಗೆಳತಿ
ಮಿನುಗುತಾರೆ ಚಂದ್ರರಾ?
ಇಲ್ಲವಾಗಿ ಮರೆವಮುನ್ನ
ಬರುವಂತ ಕಾತುರಾ!

ಪ್ರೀತಿಯೆಂದರೇನು ಗೆಳತಿ
ದುಗುಡ ಮಿಂಚು ಮೋಡವಾ?
ಮಳೆಯ ಹನಿಯು ಇಳೆಯ ತಬ್ಬಿ
ತಂಪಾಗುವ ಹಾಗೆಯಾ?

ಪ್ರೀತಿಯೆಂದರೇನು ಗೆಳತಿ
ನನ್ನ ನಿನ್ನ ಮನಗಳೇ?
ಭೋರ್ಗರೆಯುತ ದಿನವೂ ಬಿಡದೆ
ಅಪ್ಪಿಬಿಡುವ ತೆರೆಗಳೇ!

Monday, December 5, 2011

myPOD:"ಕಲಾಗಾರ"

ಇವರ ಮೂವರ ಪೈಕಿ
ಕಲಾಗಾರ ಯಾರು?
ತಾನೆಂದ ಮೊದಲು
ಬಾಗಿಲನು ಕೆತ್ತಿದವ
ಬಡಗಿ ದುಡಿಸಿದ ಧಣಿಯು
ಇದು ನನ್ನದೆಂದ!
ನನ್ನ ಕಿರಣಗಳೆ ನಿನ್ನ
ಚಂದಕ್ಕೆ ಮೂಲ
ಅನ್ನಬೇಕೆ ಸೂರ್ಯ!
ಇವರ ಜಗಳವ ನೋಡಿ
ನಕ್ಕುಬಿಟ್ಟಿತು ಕ್ಯಾಮರ!

Friday, December 2, 2011

myKavana:"ಕಣ್ಣೀರ ಕಲರು"

ಕಣ್ಣೀರಿಗೆ ಕಲರಿಲ್ಲ!
ಧನ್ಯವಾದ ದೇವರೆ!
ಒಂದುವೇಳೆ ಇದ್ದರೆ
ಮುಖವೆಲ್ಲ ಬಣ್ಣದಿ
ನೆನೆಯುತ್ತಿತ್ತು ಮಕ್ಕಳ !

ಮೋಡಗಳು ಮಳೆಗೆರೆದು
ನೋವ ತಂಪುಗೈದರೂ!
ನೆರೆಯವರಿಗೆ ತಿಳಿಯುತ್ತಿತ್ತು
ಮಳೆಯಲ್ಲಿ ಅತ್ತರೂ!

ಮುಖದ ಬಣ್ಣ ಬದಲುತ್ತಿತ್ತು
ಅತ್ತು ಅತ್ತು ಹುಡುಗಿಗೆ!
ವಿರಸದಿ ಸಮಯವೆಲ್ಲಾ
ಮುಗಿಯುತ್ತಿತ್ತು ಮೇಕಪ್ಪಿಗೆ!

'ಹುಡುಗರು ಕೂಗರು' ಮಾತು
ಸುಳ್ಳಾಗುತ್ತಿತ್ತು ನಕ್ಕರೂ!
ಸಾಕಾಗುತ್ತಿತ್ತು 'ಹೋಳಿ'ಗೂ
ನಗುತ್ತಾ ನಗುತ್ತಾ ಅತ್ತರೂ!

ಆದರ್ಶ ದಂಪತಿಗಳ
ಗುಟ್ಟು ರಟ್ಟಾಗುತಿತ್ತು
ಅಜ್ಜಿಯ ಬತ್ತಿದ ಕಣ್ಣೂ
ಕಲರಾಗುತಿತ್ತೋ ಏನೋ!

myPOD:"ಅವಳಿ"

ಕಣ್ಣು ಎರಡು, ಕೈ ಎರಡು... ಬುದ್ದಿ ಬೇಕೆ ಎರಡು?
ಕಾಲು ಎರಡು, ಕಿವಿಯು ಎರಡು, ಮಾತು ಬೇಕೆ ಎರಡು?
ತಲೆಯು ಒಂದು, ಬಾಯಿ ಒಂದು, ಮನಸು ಏಕೆ ಎರಡು?
ಹ್ರುದಯ ಒಂದು, ಉಸಿರು ಒಂದು, ಪ್ರೀತಿ ಏಕೆ ಎರಡು?
ಒಂದಿರುವವು, ಎರಡಾದರೆ ಬದುಕೆಲ್ಲ ಬರಡು!



Sunday, November 13, 2011

mypOD:"ಮಕ್ಕಳದಿನಾಚರಣೆಯ ಶುಭಾಶಯಗಳು"

myKavana:"ಪ್ರತಿಧ್ವನಿ"

ನೀರಿಗೆ ಕಲ್ಲೆಸೆದಿದ್ದು...
ಅದು ಮೇಲೆ ಜಿಗಿದು
ಮರುಕಳಿಸಿದ್ದು!
ಅಲ್ಲಿ ಯಾರಿಲ್ಲದ್ದು
ನಿನ್-ಹೆಸರ ಕೂಗಿದ್ದು
ಯಾರೋ ಬಂದಾಗ
ಪ್ರತಿಪಲಿಸಿ ಬಂದದ್ದು!
ಸುಯ್ಯೆಂದು ಬಂದ ಗಾಳಿಗೆ
ಸೆ

ಗು
ಜಾರಿದ್ಡು!
ಚಳಿಯಾಗಿದ್ದು,
ನೀರಲ್ಲಿ ಮುಖಯಾಕೋ
ಅಂದವಾಗಿ ಕಂಡಿದ್ದು!
ಬಂದ ಹಕ್ಕಿಯೊಂದು
ಪೀತಿ ಹಾಡ ಗುನುಗಿದ್ದು...
ಮೀನೊಂದು ನೀರೊಳಗೆ
ನಮ್ಮನ್ನೆ ನೋಡಿದ್ದು...
ಸುತ್ತಲಿನ ಕಣ್ಣೆಲ್ಲ
ಪ್ರಿಯೆ ನಮ್ಮ ಮೇಲಿದೆ!
ಬಹುಷ: ಪ್ರೀತಿಯೆಲ್ಲರಿಗೂನು
ಬೇಕಾಗಿದೆ!
ಅದಕಾಗಿ ನಮಗೂನು ಇವು
ಇಷ್ಟವಾಗಿದೆ!

Monday, November 7, 2011

myPOD:"ಮಿಡತೆ"

ಬದುಕೆಂಬ ಬಯಲಾಗೆ ಬಹಳಷ್ಟು ದಾರಿ
ಎಲ್ಲ ಒಂದಲ್ಲ ಕೆಲ ಬೀಳುವುದು ಜಾರಿ
ನಡೆಯುತಿದೆ ಮಿಡತೆ ಮೆಲ್ಲಮೆಲ್ಲನೆ ಮುಂದೆ
ಗ್ರಹಚಾರ, ಕ್ಯಾಮೆರ ಇದೆಯಲ್ಲ ಹಿಂದೆ!

Sunday, October 16, 2011

Wednesday, September 21, 2011

myPOD:"ಕೆಂಪು ಗುಲಾಬಿ"

ಈ ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ
ನಿನಗಾಗೆ ಕೇಳೆ ಪ್ರೇಯಸಿ
ನಿನಗಾಗೆ ಕೇಳೆ ಓ ರತಿ |೨| ||ಪಲ್ಲವಿ||

ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು ಆಹಾಂ...
ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು
ಆತುರ ತರುವಾ ವೇದನೆಯೇನು |೨|
ಜೀವದ ಜೀವವು ಪ್ರಿಯತಮೆ ನೀನು

||ಈ ಗುಲಾಬಿಯು||

ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು..ಆಹಾಂ....
ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು..
ಕಾಣದೆ ಹೋದರೆ ಅರೆಕ್ಷಣ ನಿನ್ನ |೨|
ಮರುಕ್ಷಣ ಪ್ರಿಯತಮೆ ನನ್ನ ಸಾವು

||ಈ ಗುಲಾಬಿಯು||

Wednesday, September 14, 2011

Friday, September 9, 2011

myKavana:"ಪರಿಸರ ಕಾಳಜಿ"

ಹಣದ ವ್ಯಾಮೋಹದಲಿ
ಭೂಮಿ ಮೈ ಹರಿದೆವು
ಆಕಾಶದೆತ್ತರದಿ ಮನೆಯ
ಮಾಡಿದೆವು, ಮಾರಿದೆವು

ಎತ್ತರಕೆ ಹೋದಂತೆ
ಮಣ್ಣ ನಾವ್ ಮರೆತೆವು
ಹಸಿರಲಿ ಕೆಸರಾಡಿದೆವು
ಉಸಿರಿಗೆ ವಿಷ ಸೇರಿಸಿದೆವು.

ಹಕ್ಕಿ ಹಾರುವುದಿಲ್ಲ
ಕಪ್ಪೆ ಕೂಗುವುದಿಲ್ಲ
ನಾವಲ್ಲದಿನ್ನಾರು ಅಲ್ಲಿ
ಬದುಕುವುದೆ ಇಲ್ಲ.

ಗಣಿಯ ನಾಡಲಿ ಇಂದು
ಗುಡುಗುಗಳೆ ಇರವು.
ಮಳೆಯು ಬರುವುದು ಎಂತು?
ಬರೀ ಧೂಳಿರುವುದು!