ಹೊತ್ತು ಸಾವಿರ ನೆನಪು
ಹತ್ತು ಮುಳುಗುತಲಿಹುದು
ಕಂಡ ಕನವರಿಕೆಯಲಿ
ಕೆಲವಷ್ಟೆ ನನಸು
ಬರುವ ವರುಷದಿ ಎಲ್ಲ
ನನಸಿಗೆ ಕನಸು!
ಹಾಗಲದ ಪಲ್ಯದಲಿ
ಸಿಹಿಯಿರಲಿ ಕಹಿಯಿರಲಿ
ಬದುಕ ಬಂಡಿಯಲೆಂದು
ಪಯಣವಿರಲಿ
ನಾಲಗೆಗೆ ರುಚಿಯಿರಲು
ಕಹಿಯನ್ನು ಸವಿಯುವೆವು
ಮಧುಮೇಹಿಗಳಿಗೆ
ಸಿಹಿಯೆಂದರೇನೋ!
ನಾ ತುಳಿವ ದಾರಿಯಲಿ
ಕಲ್ಲಿರಲಿ ಮುಳ್ಳಿರಲಿ
ನನ್ನ ನಡೆ ಅನುಸರಿಪ
ಜನ ಮಾತ್ರ ಇರಲಿ!
ತಲೆ ಬಿಳಿಯಾಗಲಿ
ಹಳಿ ಕವಲೊಡೆಯಲಿ
ಬಾಳ ಪಯಣದಿ
ಮನವು ಮುದಿಯಾಗದಿರಲಿ
"ಹೊಸ ವರುಷ ಎಲ್ಲರಿಗು ತರಲಿ ಹರುಷ"
Wednesday, December 29, 2010
Monday, December 27, 2010
Tuesday, December 21, 2010
myKavana:"ಬೆಳಕು"
Monday, December 13, 2010
myPOD:"ಅಳಿಯದ ಚಿತ್ರಗಳು"
ಡಿಜಿಟಲ್ ಕ್ಯಾಮರಾ ಯುಗದಲ್ಲಿ 'ಅಳಿಯದ ಚಿತ್ರಗಳು' ಎಂಬ ಪದಗಳ ಬಳಕೆ ಬಹಳ ಅರ್ಥಪೂರ್ಣ ಅಂದುಕೊಂಡಿದ್ದೇನೆ. ಅದೆಷ್ಟೋ ಚಿತ್ರಗಳ ಹಿಡಿಯುವ ಸಂದರ್ಭದಲ್ಲಿ ಕ್ಯಾಮೆರ/ಕಂಪ್ಯೂಟರ್ ಮೆಮರಿ ಮತ್ತು ನನ್ನ ಮನದಿಂದ ಮರೆಯಾಗದ ಚಿತ್ರಗಳೇ ಈ 'ಅಳಿಯದ ಚಿತ್ರಗಳು'!
ಮಾಯಾಜಾಲ!
ಗೆಂಟಿಗೆ ಹೂ...
ಸೀಮೆ ಎಣ್ಣೆ ಬುಡ್ಡಿ
ಸೇವಂತಿಯೆ...
ಏನು ಬಣ್ಣ ಬಣ್ಣಾ, ಈ ನವಿಲು ಕಣ್ಣಾ!
ರೇಶಿಮೆಯಸ್ಟು ನಯಾ, ಹಲ್ಲಿಗಳಿಗೆ ಭಯ!
(ವಿ. ಸೂ: ನವಿಲುಗರಿಯನ್ನ ಗೋಡೆಗೆ ಸಿಕ್ಕಿಸಿಟ್ಟಲ್ಲಿ ಹಲ್ಲಿಗಳ ಓಡಾಟ ಕಡಿಮೆಯಾಗುತ್ತೆ)
ಮಾಯಾಜಾಲ!
ಗೆಂಟಿಗೆ ಹೂ...
ಸೀಮೆ ಎಣ್ಣೆ ಬುಡ್ಡಿ
ಸೇವಂತಿಯೆ...
ಏನು ಬಣ್ಣ ಬಣ್ಣಾ, ಈ ನವಿಲು ಕಣ್ಣಾ!
ರೇಶಿಮೆಯಸ್ಟು ನಯಾ, ಹಲ್ಲಿಗಳಿಗೆ ಭಯ!
(ವಿ. ಸೂ: ನವಿಲುಗರಿಯನ್ನ ಗೋಡೆಗೆ ಸಿಕ್ಕಿಸಿಟ್ಟಲ್ಲಿ ಹಲ್ಲಿಗಳ ಓಡಾಟ ಕಡಿಮೆಯಾಗುತ್ತೆ)
Thursday, December 9, 2010
myKavana:"ಚಳಿಗಾಲ"
ಊಟದ ತಂಬಳಿ... ಕರಿ ಕಂಬಳಿಗೆ...
ದಪ್ಪನೆ ಹಾಸಿಗೆ... ಬೆಚ್ಚನೆ ಉಸಿರಿಗೆ...
ನೆಚ್ಚಿನ ಮಡದಿಗೆ... ತೊಡೆಯಲಿ ಮಲಗಿದ ಹಸು ಕಂದಮ್ಮನಿಗೆ...
ಹಚ್ಚನೆ ಹಸುರಿಗೆ... ಕೆಂಪನೆ ಹರಿವೆಗೆ...
ನೀಲಿಯ ಬಾನಿಗೆ... ಮಬ್ಬಿನ ತೇರಿಗೆ...
ಹನಿ ಹನಿ ನೀರಿಗೆ... ತಂಪಿನ ಗಾಳಿಗೆ...
ಮಾಮರ ಚಿಗುರಿಗೆ... ಕೋಗಿಲೆ ಕೂಗಿಗೆ...
ದಪ್ಪನೆ ಅಂಗಿಗೆ... ಬಿಳಿ ಮುಂಡಾಸಿಗೆ...
ಚುಮು ಚುಮು ಚಳಿಗೆ... ಕ್ಯಾಮರ ಕಣ್ಣಿಗೆ
...
ಈ ಚಳಿ ಅರ್ಪಣೆ!
ದಪ್ಪನೆ ಹಾಸಿಗೆ... ಬೆಚ್ಚನೆ ಉಸಿರಿಗೆ...
ನೆಚ್ಚಿನ ಮಡದಿಗೆ... ತೊಡೆಯಲಿ ಮಲಗಿದ ಹಸು ಕಂದಮ್ಮನಿಗೆ...
ಹಚ್ಚನೆ ಹಸುರಿಗೆ... ಕೆಂಪನೆ ಹರಿವೆಗೆ...
ನೀಲಿಯ ಬಾನಿಗೆ... ಮಬ್ಬಿನ ತೇರಿಗೆ...
ಹನಿ ಹನಿ ನೀರಿಗೆ... ತಂಪಿನ ಗಾಳಿಗೆ...
ಮಾಮರ ಚಿಗುರಿಗೆ... ಕೋಗಿಲೆ ಕೂಗಿಗೆ...
ದಪ್ಪನೆ ಅಂಗಿಗೆ... ಬಿಳಿ ಮುಂಡಾಸಿಗೆ...
ಚುಮು ಚುಮು ಚಳಿಗೆ... ಕ್ಯಾಮರ ಕಣ್ಣಿಗೆ
...
ಈ ಚಳಿ ಅರ್ಪಣೆ!
Thursday, December 2, 2010
Subscribe to:
Posts (Atom)