ಯುಗಾದಿ ಸಿಹಿ, ಹೂವ ಬೆಳೆವ ಎಳೆ-ಚಿಗುರಿಗೆ,
ಮಾಮರದಿ ರಸವ ಹೀರಿ ಕುಹೂ ಎನ್ನೋ ಪಿಕಗಳಿಗೆ!
ಯುಗಾದಿ ಕಹಿ, ಕೊಳೆಯಲಿರುವ ಮರಬಿಟ್ಟ ಹಣ್ಣಿಗೆ,
ನೀರು ಆರಿ - ಸೆಖೆಯು ಏರಿ - ಬೆಂದು ಹೋದ ಮಣ್ಣಿಗೆ!
ಸಿಹಿಯಾದ ಹಣ್ಣಲಿ ಕಹಿಯಿದೆ, ಕಹಿಯಾದ ಚಿಗುರಿಗೆ ಸಿಹಿಯಿದೆ!
ಕಹಿಯಲಿ ಸಿಹಿಕಾಣಿ, ಕಹಿಯು ಸಿಹಿಯೆ ಆಗದೆ?
ಕಾಲಚಕ್ರ ನಿಂತೇ ಇಲ್ಲ,
ನಿಂತರದಕೆ ಉಳಿವೇ ಇಲ್ಲ!
ಎಲ್ಲ ಉಂಟು, ಎನೂ ಇಲ್ಲ ಎಂಬುದೇನೆ...
ಬದುಕು ತಾನೆ?
Tuesday, March 16, 2010
Subscribe to:
Post Comments (Atom)
No comments:
Post a Comment