
ಅಂಬಾಗಿಲು - ಕಲ್ಸಂಕ ರಸ್ತೆಯ ಅಗಲೀಕರಣ ನೆಪದಲ್ಲಿ ಕಳೆದ 2-3 ವಾರಗಳಿಂದ ನಡೆಯುತ್ತಿರುವ ಮರಗಳ ಮಾರಣಹೋಮ ಮುಂದುವರಿದಿದೆ. ಪೊಲೀಸ್ ಬಿಗಿ ಬಂದೊಬಸ್ತ್-ನಲ್ಲಿ ನಡೆಯುತ್ತಿರುವ ಈ ಕಾರ್ಯ ಅಬಿವ್ರದ್ದಿ ನೆಪದಲ್ಲಿ ಅನಿವಾರ್ಯವಾದರೂ ಒಂದಿಶ್ಟು ವಿಮರ್ಶೆ ಇಲ್ಲಿ ಅಗತ್ಯವಾಗಿದೆ. ಅದೆಷ್ಟೊ ವಸಂತಗಳನ್ನ ಕಂಡು ಬದುಕುತ್ತ್ತಿದ್ದ ಮರಗಳನ್ನು ಧರೆಗುರುಳಿಸಿ ಅಗಲೀಕರಣ ಕಾರ್ಯ ಪ್ರರಂಭಮಾಡಿಯಾಗಿದೆ. ಎಷ್ಟೊ ಮನೆಗಳು, ಅಂಗಡಿಗಳನ್ನು ಸ್ತಳಾಂತರಿಸಲಾಗಿದೆ, ಆದರೆ ಕಡಿದ ಮರಗಳನ್ನು ಸ್ತಳಾಂತರಿಸುವವರಾರು? ರಸ್ತೆ ಪಕ್ಕದ ಸ್ತಳಗಲಿಗೆ ಪರಿಹಾರ ದೊರಕಿಸಿ ಆಗಿದೆ. ಅದರೆ ಮೂಕ ಮರಗಳ ಬದುಕು ಮೊಟಕುಗೊಳಿಸಿ ಸಮಸ್ಯೆ ಬಗೆಹರಿಸಲಾಗಿದೆ. ಮರಗಳಿಗೆ ಪರಿಹಾರವಾಗಿ ಮರಣವನ್ನು ಕರುಣಿಸಲಾಗಿದೆ. ಎಲ್ಲ ಸರಿ.. ಅದರೆ, ಈ ರಸ್ತೆ ಅಗಲೀಕರಣ ಕಾಮಗಾರಿ ಮುಗಿಯಲು ನಾವಿನ್ನು ಅದೆಸ್ಟು ವಸಂತಗಳನ್ನ ಕಾಣಬೆಕೋ ಆ ದೇವರೆ ಬಲ್ಲ! ಪರಿಸರಪ್ರೇಮಿಯಾಗಿ ನನ್ನ ಕಳಕಳಿಯ ವಿನಂತಿ ಎನೆಂದರೆ ಸಂಬಂದಪಟ್ಟ ಅದಿಕಾರಿಗಳು ಇದರತ್ತ ಗಮನ ಹರಿಸಬೆಕು ಎಂಬುದಶ್ಟೆ. ಪರಿಸರ ವಿರೊಧಿ ಚಟುವಟಿಕೆಗಳನ್ನ ಬೀದಿಗೆಳೆಯಬೆಕಾದುದು ನಮ್ಮಲ್ಲರ ಕರ್ತವ್ಯ. ಏನೆ ಇರಲಿ, ಮರಗಳ ಸಾವಿನ ವರ್ಷಂತ್ಯದಲ್ಲಿ ಕಾಮಗಾರಿ ಮುಗಿಯಲಿ ಎಂಬುದು ಮುಂದಿನ ಹಾರೈಕೆ!
No comments:
Post a Comment