Wednesday, June 20, 2012

myPOD:"ಹದ್ದು ಕಣ್ಣಿನ ನೋಟ"


Sunday, April 8, 2012

myPOD:"ಮತ್ತೆ ಮುಂಗಾರು"

ಮುಂಗಾರಿನ ಮೋಡದೊಳಗೆ
ರವಿತೇಜನ ಹೊನ್ನ ಕಿರಣ
ಭೂಮಿಸಾಕ್ಷಿಯಾಗಿ ಕೆಳಗೆ
ಹಸಿರು ತಳಿರ ತೋರಣ

Friday, January 13, 2012

myKavana:"ಸಂಕ್ರಾತಿ"

ಕಹಿಯನು ನುಂಗಿ ಸಿಹಿಯನು ಜಗಿದು
ತಿನ್ನಲು ಕಲಿಯಲು ನೋವೆಲ್ಲಿಹುದು!
ಹರುಷದಿ ಹಂಚು ನಿನ್ನಯ ಗಂಟು
ಇದರಲಿ ಬಾಳುವೆ ಸಾರ್ಥಕ ಉಂಟು!

ನನಗೂ ನಿನಗೂ ಒಂದೇ ಮಾತು
ಸಾಧನೆ ಇರದ ಬದುಕದು ಭ್ರಾಂತು
ಸ್ವರ್ಗದಿ ಮನೆಯನು ಮಾಡಿರು ಇಲ್ಲ
ಬಾಳಲಿ ತಪ್ಪದು ಬೇವು-ಬೆಲ್ಲ

ಸಂಕ್ರಾತಿಯ ಶುಭಾಶಯಗಳು.