Monday, March 31, 2008

myKavana:"ತುತ್ತಾ ಮುತ್ತಾ"

ಜಾರಿಬಿದ್ದ ಕಣ್ಣನೀರ ಕೈಯದೊಂದು ಒರೆಸಿದೆ
ತುಟಿಯ ಮುತ್ತು ತುತ್ತ ಕೊಟ್ಟ ಕೈಯ ಇಂದು ಮರೆಸಿದೆ
ಅಮ್ಮ ನಿನ್ನ ತ್ಯಾಗವೆಲ್ಲ ಏನ ತಾನೆ ಬಯಸಿದೆ?
ಇವಳ ಪ್ರೀತಿ ನನ್ನ ಪ್ರೀತಿಗಾಗಿ ಮಾತ್ರ ಲಭಿಸಿದೆ!

ನೋವನುಂಗಿ ನನ್ನ ಹಡೆದು ಕನಸೊಂದು ಕಟ್ಟಿದೆ
ನನ್ನ ಮನಸು ಅವಳ ಕನಸ ನನಸು ಮಾಡ ಹೊರಟಿದೆ
ನನ್ನ ಮನಸು ಮಗಳ ಮುಂದೆ ಬೆಳೆಸಬೇಕೆಂದಿದೆ
ಮಗಳ ಮನಸ ವಿಧಿಯು ಎಂದೊ ಬೇರೆ ಕಡೆಗೆ ಒಲಿಸಿದೆ

ಅಮ್ಮ ನಿನ್ನ ಬದುಕು ಇಲ್ಲಿ ಎಂದೊ ಸಾರ್ಥವಾಗಿದೆ
ನನ್ನ ಬದುಕು ಪರರಿಗಾಗಿ ನಿನ್ನ ಬದುಕಿನಂತಿದೆ
ಈ ಜೀವಚಕ್ರ ಬದುಕಿನಲ್ಲಿ ತುಂಬಾ ತಿಳಿ ಹೇಳಿದೆ
ಋಣಾನುಬಂಧ ಮುಕ್ತದೆಡೆಗೆ ಬದುಕನಡೆಸಬೇಕಿದೆ

Thursday, March 27, 2008

myHarate:"ಷೇರುಪೇಟೆ"

ಷೇರುಪೇಟೆ ಬಗ್ಗೆ ತಿಳಿಯದವರು ಈಗಿನ ಕಾಲದಲ್ಲಂತು ಯಾರು ಇಲ್ಲ ಎನ್ನಿ. D-Mat account ಇಲ್ಲದವ ಎನೋ ಹೊಂದಿಲ್ಲದವನಂತೆ. ಯಾರು Invest/trade ಮಾಡಲು ಅರಿತಿಲ್ಲವೊ ಅವ ಎನೋ ತಿಳಿದಿರದ ಮುಗ್ದನಂತೆ.

ಇಂತ ಷೆರುಪೇಟೆ ವ್ಯವಹಾರವನ್ನು ಮಿತ್ರರೊಬ್ಬರು ಸಾಗರಕ್ಕೆ ಹೋಲಿಸಿದ್ದಾರೆ.. ಇಲ್ಲಿದೆ ಆ ಸಾಗರದ ವಿಸ್ತಾರ ರೂಪ.

ಸಾಗರದಲ್ಲಿ ಅಲೆಗಳು ಬರುವದು ನಿಲ್ಲಲ್ಲ ತಾನೆ? ಅಂತೆಯೇ ಷೇರುಪೇಟೆ ಸೂಚ್ಯಾಂಕ ಒಂದೆ ತರ ನಿಲ್ಲಲಾರದು. ಅಲೆ ಮೇಲೆ ಬಂದಾಗ ಎಲ್ಲ ಅದರೊಂದಿಗೆ ಓಡಿಕೊಂಡು ಬರುತ್ತಾರೆ.. ಅಂತೆಯೆ ಇಳಿಯುವಗಲೂ ಒಟ್ಟಿಗೆ ಹೊಗುತ್ತಾರೆ.

ಕೆಲವರು ದಡದಿಂದ ನೊಡುತ್ತ ಅನಂದಿಸುತ್ತಾರೆ.. ಕೆಲವರು ಹೋಗಿ ಚಪ್ಪಲಿ ಕಳೆದು ಬಂದಿರುತ್ತಾರೆ. ಕೆಲವರು ಕಾಲು ಹೂತು ಬಾಕಿ ಆಗಿ ಬಿಡುತ್ತಾರೆ. ಕೆಲವರು ಇನ್ನೊಬ್ಬರ ಚಪ್ಪಲಿ ಹಾಕೊಂಡು ಹೊಗಿ ಕಳೆದು ಬಿಟ್ಟು ಪಶ್ಚಾತ್ತಾಪ ಪಡುತ್ತಾರೆ. ಹಮ್.. ಹೇಳಿದಾಗೆ, ಈ ಭರತ-ಇಳಿತ ಗಳ ನಡುವೆ ಬಲೆ ಬೀಸಿ ಮೀನು ಹಿಡಿದುಬಿಡುವವರು ತುಂಬಾ ಜಾಣರೆನ್ನಿ!

ಎನಂತೀರ?

Whatever, this line is ever true to all.. its not so easy to earn money.

Wednesday, March 26, 2008

ಅವರು ಹೀಗಂದರು

"ದಿನದ ಬ್ಲಾಗ್ - ಸ್ವರಚಿತ

ಕನ್ನಡದ ಬ್ಲಾಗ್ ಬಾನಿನ ಈ ದಿನದ ಚುಕ್ಕಿ, ತೋರಿಸುತ್ತಾರೆ ಬ್ಲಾಗಿನಿ.
ಇಂದಿನ ಬ್ಲಾಗ್ ಬೊಗಸೆಯಲ್ಲಿ ಉಡುಪಿಯ ಷಣ್ಮುಖರಾಜ ಅವರ ಸ್ವರಚಿತ ಎಂಬ ಹೂಗುಚ್ಛ. ತಂತ್ರಜ್ಞಾನ ಕ್ಷೇತ್ರದಲ್ಲಿದ್ದುಕೊಂಡು ಕನ್ನಡದ ದೋಣಿಯಲ್ಲಿ ಹೊರಟ ಇನ್ನೊಂದು ಭಾವಯಾನವಿಲ್ಲಿದೆ. ನಾನು ಬೇರೇವ್ರ ತರಾ ಅಲ್ಲ, ಬನ್ನಿ ಹರಟೆಹೊಡೆಯೋಣ, ಓದಿ, ಓದಿಸಿ ಲೈಫ್ ನಿಮ್ಮದಾಗಿಸಿಕೊಳ್ಳಿ ಅಂತ ಟಿಪಿಕಲ್ ಮ್ಯಾನೇಜ್‌ಮೆಂಟ್ ಗುರು ತರಹ ಪರಿಚಯ ಹೇಳಿಕೊಂಡಿರುವ ಈ ಲೇಖಕರ ಬರಹಗಳು ಸುಲಭ ಕನ್ನಡದ ಲಘು ಓದಿಗೆ ಒದಗುತ್ತವೆ.

ಇತ್ತೀಚಿನ ಕವನ ಉಪದೇಶದಲ್ಲಿ ಓರಗೆಯವರಿಗೆ [?] ಉಪದೇಶ ಹೇಳಿದ್ದಾರೆ. ಪಾಡ್ ಕ್ಯಾಸ್ಟ್ಗಳು, ಹನಿಗವನಗಳು, ಹನಿಗತೆಗಳು, ಹರಟೆ. ಈ ಎಲ್ಲವನ್ನೂ ಬಳಸಿ ತಮ್ಮ ಮನದ ಲವಲವಿಕೆಯನ್ನು ಓದುಗರೊಡನೆ ಹಂಚಿಕೊಂಡಿದ್ದಾರೆ. ಹಕ್ಕಿಹಾಡು, ಹಳ್ಳಿಗೀತ, ಅವಳ ಕತೆ, ಹೋಳಿ ಶುಭಾಶಯ, ಆಲಮಟ್ಟಿ, ಉಪದೇಶ, ಹೀಗೆ ಸುಮ್ಮನೆ, ಗುಬ್ಬಚ್ಚಿ ಗೂಡಿನಲ್ಲಿ, ಮಾಯದ ಕಂಗಳ ಚೆಲುವೆ ಕೇಳು, ಬೆಟ್ಟದಾ ಮ್ಯಾಲೊಂದು ಟೆಂಟು ಹಾಕಿ, ಕೇಕು ಪುರಾಣ, ನನ್ ಮೇಸ್ಟ್ರು, ದೇವರೊಬ್ಬ ನಾಮ ಹಲವು, ತಾರೆ ಭುವಿಯ ಮ್ಯಾಲೆ, ಮೊದಲಾದ ಬರಹಗಳು ಓದಲು ಖುಶಿ ಕೊಡುತ್ತವೆ."

Ref: http://www.kendasampige.com/preview/?page_id=176

ಒಂದಂತು ನಿಜ.. ನಿಮ್ ಕುಶೀನೇ ನಮ್ ಕುಶಿ!

myKavana:"ಉಪದೇಶ"

ಅರಳಿ ಮುದುಡೋ ಹೂಗಳೇ
ಕಾಯಬೇಡಿ ನೀವು ಎಂದು
ಮಹಡಿ ಮನೆಯ ಹುಡುಗಿಗೆ!
ಗುಡಿಸಿ ಒರೆಸಿ ಬದುಕ ಸವೆಸೋ
ನಿಂಗಿ ನೀರ ಎರೆದಳು
ನಿಮ್ಮ ಅವಳು ತಾನೆ ಪೊರೆದಳು?
ಅವಳ ಉದ್ದ ತುರುಬಿನಲ್ಲಿ
ಕಾಣಿ ನಿಮ್ಮ ಸ್ವರ್ಗವ!

ಅರಳಿ ಮುದುಡೋ ಹೂಗಳೇ
ಕಾಯಬೇಡಿ ನೀವು ಎಂದು
ಮುದ್ದು ಮುಖದ ಹುಡುಗಿಗೆ!
ಅವಳ ಮುದ್ದು ನಿಮ್ಮ ಇಹವ
ಮರೆಸದಿರದು ಎಂದಿಗೂ
ಆಗ ಮುಖವ ಮರೆಸಿ ನೀವು
ಅಲ್ಲಿ ಅಡಗಬೇಕು ಹಿಂದೆಯೆ

ಅರಳಿ ಮುದುಡೋ ಹೂಗಳೇ
ಕಾಯಬೇಡಿ ನೀವು ಎಂದು
ಮಧುವ ಬಯಸೋ ದುಂಬಿಗೆ!
ಹೀರಿ ನಿಮ್ಮ ಜೀವ ಸತ್ವ
ಅದು ಹಾರಿ ಬಿಡದೆ ಪರರಿಗೆ?
ಸುತ್ತಿ ಸುಳಿದು ಅಲ್ಲೇ ಇರೆ
ಮತ್ತೆ ಹಾರಿ ಬರದು ನಿಮ್ಮಲ್ಲಿಗೆ

Sunday, March 23, 2008

myKavana:"ಹಳ್ಳಿಗೀತ"

ಹಳ್ಳೀಯ ಮನೆ ಚಂದ
ಕಳ್ಳೀಯ ಹೂ ಚಂದ
ಮಳ್ಳೀಯ ಮೋರೆ ನಗು ಚಂದ |
ಹಳ್ಳೀಲಿ, ಬಸ್ಸೀನ ಕೂಗೂ ಬಲು ಚಂದ || 1 ||

ಗಂಗೇಯ ಕರು ಚಂದ
ತುಂಗೆಯಾ ಸ್ವರ ಚಂದ
ನಿಂಗೀಯ ಹಾಡ ಪದ ಚಂದ |
ಹಳ್ಳೀಲಿ, ಜಾಜೀಯ ಕಂಪು ಬಲು ಚಂದ || 2 ||

ರಾಗೀಯ ತೆನೆ ಚಂದ
ಸೋಗೆಯ ಗರಿ ಚಂದ
ಗೇರೀನ ಹಣ್ಣ ರಸ ಚಂದ |
ಹಳ್ಳೀಲಿ, ಕೂಗೀಲೆ ಕೂಗು ಬಲು ಚಂದ|| 3 ||

ಮಾತೀಗೆ ಮಿತಿಯಿಲ್ಲ
ಉಪಚಾರ ಮಿತಿಯಲ್ಲ
ಮನೆಯಾಲಿ ಜಾಗಕ್ಕೆ ಕೂಡ ಮಿತಿಯಿಲ್ಲ |
ಹಳ್ಳೀಲಿ, ಎಲ್ಲದಕ್ಕೆಂದೂ ಮಿತಿಯಿಲ್ಲ || 4 ||

ಈ ಏರು ಪದ ಬೆಳೆಯುತ್ತನೆ ಹೊಗುತ್ತದೆ!

Inspired by cityಗೀತ/ಪೇಟೆಯ ಪಾಡ್ದನ series from "http://deraje.blogspot.com/"