Friday, January 16, 2015

ಕಾಜಾಣ


'ಕಾಜಾಣ'ಗಳು ಪರಾವಲಂಬಿಗಳಲ್ಲ. ಇವು ನಿರುಪದ್ರವಿಯಾಗಿದ್ದು, ಉಳಿದ ನಿರುಪದ್ರವಿ ಹಕ್ಕಿಗಳಿಗೆ ಉಪದ್ರಕೊಡುವ ಇತರೇ ಹಕ್ಕಿಯನ್ನು ಸುಮ್ಮನೆ ನೋಡುತ್ತಾ ಸಹಿಸಲಾರವು. ಹದ್ದಿನಂತಹ ದೊಡ್ಡ ಮತ್ತು ಶಕ್ತಿಯುತವಾದ ಹಕ್ಕಿಗಳನ್ನು ದಿಟ್ಟವಾಗಿ ಓಡಿಸಬಲ್ಲ ಅಸಾಮಾನ್ಯ ಹಕ್ಕಿ ಇದು. ದನ ಹುಲ್ಲುಮೇಯುವಾಗ ಹುಲ್ಲಿನೆಡೆಯಲ್ಲಿ ಸುಲಭವಾಗಿ ಕಂಡುಬರುವ ಮಿಡತೆಯಂತಹ ಕೀಟಗಳನ್ನು ತಿನ್ನುವುದಕ್ಕಾಗಿ ಇಲ್ಲಿ ದನದ ಮೇಲೆ ಕುಳಿತು ಸವಾರಿ ಮಾಡುತ್ತಿದೆ.

Velvet Fronted Nuthatch

ಈ ಬಣ್ಣ-ಬಣ್ಣದ ಪುಟ್ಟ ಹಕ್ಕಿಯನ್ನು ಬಲ್ಲಿರೇನಯ್ಯ? ಗುಬ್ಬಿಗಾತ್ರದ ಈ ಹಕ್ಕಿ ಮರದ ಮೇಲೆಯೇ ಕಂಡುಬರುವುದರಿಂದ ಮರಗುಬ್ಬಿ ಎಂದು ಕರೆಯಲ್ಪಡುವುದೋ ಎನೋ? ಮರಕುಟಿಗಗಳು ಕೇವಲ ಮರ ಏರಬಲ್ಲವಷ್ಟೆ, ಆದರೆ ಈ ಮಕ್ಮಲ್ ನೆತ್ತಿಯ ಮರಗುಬ್ಬಿಗಳು ಮರದ ಮೇಲೂ ಕೆಳಗೂ ಸಾಲೀಸಾಗಿ ಏರಿಳಿದು ಮಾಡಬಲ್ಲವು. ಹುಳ-ಹುಪ್ಪಟೆ, ಜೇಡ ಇದರ ಆಹಾರ, ಹಾಗಾಗಿ ಇವು ಮರಗಳ ಪಾಲಿನ ಡಾಕ್ಟರು ಎಂದರೆ ತಪ್ಪಲ್ಲ!
Velvet Fronted Nuthatch | Sullia | Dec14


ಉಲಿಯಕ್ಕಿ



ಉಲಿಯಕ್ಕಿ ಕೂರಲು ತೆನೆಬಾಗಿತು
ಉಲಿಯುತ್ತಾ ಗಾಳಿಯಲಿ ದ್ವನಿಗೂಡಿತು

Saturday, August 2, 2014

ಕೂಪ-ಮಂಡೂಕ ಎನ್ನದಿರಿ, ಕಪ್ಪೆಗಳ ಪ್ರಪಂಚ ಬಹುದೊಡ್ಡದು!

ನಾವು ಯಾವಾಗ ಕಪ್ಪೆಗಳ ಬಗ್ಗೆ ಆಸಕ್ತಿ ಮೂಡಿಸಿಕೊಂಡು ಈ ಸೂಕ್ಷ್ಮ ಪ್ರಪಂಚವನ್ನು ಗಮನಿಸತೊಡಗುತ್ತೇವೋ, ಅಲ್ಲಿಂದ ಪ್ರತಿ ಕಪ್ಪೆಯ ವಟಗುಟ್ಟುವಿಕೆಯೂ ಸಂಗೀತವಾಗಿ, ಅವುಗಳ ನೆಗೆತ ನಾಟ್ಯವಾಗಿ ಒಂದು ದೊಡ್ಡ ಪ್ರಪಂಚವೇ ನಮ್ಮೆದುರು ತೆರೆದುಕೊಳ್ಳುತ್ತದೆ. 

ಅಂತರ್ಜಾಲ ಕೊಂಡಿ: http://www.hosadigantha.in/index.php?option=com_epaper&edition=bangalore&date=2014-08-03 (ಸಾಪ್ತಾಹಿಕ ವಿಭಾಗ)


Monday, April 28, 2014

myKavana:"ಒಂಟಿ ಮರ ನಕ್ಕಿತು..."



ಪಟ್ಟಣದ ಮಧ್ಯದಲಿ
ಹೇಗೋ ಉಳಿದಿತ್ತು.
ಒಂಟಿಯಾಗಿತ್ತು.
ನಗುವುದನೇ ಮರೆತಿತ್ತು.
ಯಾರಿಂದು ನಗಿಸಿದರು?
ಇಲ್ಲಿ ಗಾಳಿ ಬೀಸಲಿಲ್ಲ,
ಮೋಡ ಮುಸುಕಿದೆ.
ರವಿಯೂ ಕಾಣುವುದಿಲ್ಲ.
ಬಹಳ ಸೆಖೆ-ನಗಿಸಲು
ಇಲ್ಲಿಗೆ ಮಳೆಯೂ ಬರವುದಿಲ್ಲ.
ಯಾಕೆ ನಕ್ಕಿತು ಮರವು?
ತನಗಿಂತ ಎತ್ತರದಿ
ಗಗನಚುಂಬಿಸಲು
ಹೊರಟ ಕಟ್ಟಡಗಳೇ
ನೀವು ನಗಿಸಿದಿರಾ?
ಸುತ್ತ ಕಸರಾಶಿ,
ಇದು ಹಿಂದಿನ ಸಸ್ಯಕಾಶಿ
ಬೇರ ಸೋಕುತಿದೆ ದುರ್ನಾತ ನೀರು
ಸುತ್ತ ತುಂಬಾ ಹೊಗೆ-ದೂಳು,
ಒಡಲೊಳು ಬ್ಯಾನರಿನ ಮೊಳೆ ಚೂರು!
ಯಾರು ನಗಿಸಿದರಿಲ್ಲಿ ಮರಳಿ ಮರವ?
ಮತ್ತೆ ಯೋಚಿಸಿದೆ,
ನಗಲು ಕಾರಣವೇಕೆ?
ಹೀಗೊಮ್ಮೆ,ಹಾಗೊಮ್ಮೆ
ನಗಬಾರದೇ, ಪರರ ನಗಿಸಲು?
ನಗಲಿ ಮರ ನಗಿಸಲು,
ನಾಳೆ ಮರ ಅಳಿದ ಮೇಲೆ
ನಗಿಸಲಾರಿರರು.
ಒಂಟಿಮರ ನಗುವ ಭರದಿ
ಹಾರುತಿವೆ ಕೆಲ ಹಣ್ಣೆಲೆಗಳು, ಇದು ಕುಹಕವಲ್ಲ!
ಕಾಣಿಸದೆ ನಿಮಗೆ? ನೋಡಿಬಿಡಿ ಇಂದೇ,
ನಾಳೆ ಮರವಿರದು ಇಲ್ಲಿ.
ಯಾಕೆ ನಕ್ಕಿತು ಮರವು?
ವರುಷ ಕಳೆದ ಮೇಲೆ, ಮರಳಿದೆ
ಹಕ್ಕಿಗಳ ಹಿಂಡು, ಮರದ ಹಣ್ಣಿಗೆಂದು.
ಮಾತಾಡಲಿದೆ ಅವಕೆ ತುಂಬ ವಿಷಯ.
ಮರೆತ ನಗುವ ಮತ್ತೆ ಇವು ಮೂಡಿಸಿತೇ?
ಕೊನೆಗೆ,
ಮರಬೇಡಿದೆ- ಹಕ್ಕಿಗೆ, ಹಣ್ಣತಿನ್ನಿರಿ ನೀವು,
ಮತ್ತೆ ದೂರದೂರಿಗೆ ಹೋಗಿ ಬೀಜ ಬಿತ್ತಲು!