Friday, May 13, 2011

myPOD:"ಚಿರಂಜೀವಿ ಕಾರ್ತಿಕನಿಗೆ ಬ್ರಹ್ಮೋಪದೇಶ"

"ದಿವಿಶ್ರಯಸ್ವಾಂತರಿಕ್ಷೇ ಯತಸ್ವ ಪೃಥಿವ್ಯಾ ಸಂಭವ ಬ್ರಹ್ಮವರ್ಚಸಮಸಿ ಬ್ರಹ್ಮವರ್ಚಸಾಯತ್ವ!"

myPOD:"ಇಳಿವಯಸ್ಸಿನ ಕಳೆ"



Tuesday, March 22, 2011

myKavana:"ಮಾಮರ ಕೂಗು! - Part 2"

ರಸ್ತೆ ಅಗಲೀಕರಣ ನೆಪದಲ್ಲಿ ಸಂತೆಕಟ್ಟೆ ರಸ್ತೆ ಸುತ್ತ (NH-17: Udupi to kundaapura) ಸಾಲುಮರಗಳು ಉರುಳುತ್ತ ನೆನಪಿಸಿದ್ದು ಬರೀ ನೋವು. ಇದೇ ಈ 'ಮಾಮರ ಕೂಗು - part 2'. ಮಹಾಭಾರತದಲ್ಲಿ ವರ್ಣಿಸಿದ ಕುರುಕ್ಷೇತ್ರದ ಕೊನೆದಿನಕ್ಕಿಂತಲೂ ಈ ನೈಜ ದೃಶ್ಯ ಭಯಂಕರ:-(

ಕಂಪಿಸಿತು ಭೂಮಿಯಿಡಿ ಹಸಿಮರವ ಮುರಿಯಲು.
ಕೊಲೆಯಾಗಿ ಬಿದ್ದವು ಎಳೆಕಾಯಿ ಚಿಗುರುಗಳು.
ಮರೆಯಾಗಿರುವ ನಮ್ಮ ಮಾನವೀಯತೆಗೆ.
ಸತ್ತುಮಲಗಿದೆ ಸಾಲುಮರಗಳು ಜೊತೆಗೆ.

ಮರುಭೂಮಿಯಂತಿದೆ, ನೀರಿಲ್ಲದೂರಿನಲಿ.
ಮರವಿಲ್ಲ, ನೆರಳಿಲ್ಲ, ಮುಂದೆ ಮಳೆಯೂ ಎಲ್ಲಿ?
ಬೇಸಗೆಯ ಶಾಖ ಜೊತೆ ಧೂಳಿನೋಕುಳಿಯಿದೆ.
ನಿಲ್ಲದಿರೆ ಇದರಲ್ಲೆ ಮನುಕುಲದ ಅಳಿವಿದೆ.

Thursday, January 6, 2011

myKavana:"ಮಾಮರ ಕೂಗು!"

ರಸ್ತೆ ಅಗಲೀಕರಣ ನೆಪದಲ್ಲಿ ಸಂತೆಕಟ್ಟೆ ರಸ್ತೆ ಸುತ್ತ ಹೂಬಿಟ್ಟ 'ಕಾಡು ಮಾವಿನಮರ' ಉರುಳುತ್ತ ನೆನಪಿಸಿದ್ದು ಬರೀ ನೋವು. ಇದೇ ಈ 'ಮಾಮರ ಕೂಗು'.

ನೂರಾರು ವರುಷದ ಕನಸಲ್ಲವೇನು
ನೋಡಬೇಕಿದೆ ನಾನೂ ಹೊಸ ರಸ್ತೆಯನ್ನು
ಸಂತಸದಿ ಚಳಿಯಲ್ಲಿ ಹೂಬಿಟ್ಟೆ ನಾನು
ಕೊಡಲಿ ಏಟೇಕೆ ಬರಿ ಸ್ವಾರ್ಥಿ ನೀನು!

ನಾನೀಗ ಹೂಬಿಟ್ಟೆ ನಿಮಗಾಗಿ ತಾನೆ!
ಜಾಗವನು ಬಿಡಬೇಕೆ ನಿಮ್ಮಾಜ್ಞೆ ಏನೆ?
ನನ್ನ ಸಂತತಿ ಇಲ್ಲಿ ಬರಲಾರರಿನ್ನು
ತಗೋ ನಿಮ್ಮ ಕುಲಕೆ ಈ ಹಿಡಿಶಾಪವನ್ನು!

ಸಹಿಸಿದೆ ಹಗಲಿರುಳ ವಾಹನದ ಅಬ್ಬರ
ಹಗಲಿನಲಿ ನೆರಳಾದೆ ಹಾಕಿ ಎಲೆ ಚಪ್ಪರ
ತಂಗಾಳಿ ಸಿಹಿಗಾಳಿ ಬೇಕೆ ನಿನಗೆ?
ನನ್ನಂತೆ ಮರಣವೆ ಕೊನೆಗೆ ನಿನಗೆ