Thursday, December 31, 2009

myPOD:"ಹೊಸವರುಷ ತರಲಿ ಹರುಷ!"

ನನ್ನ ಹವ್ಯಾಸ ಹುಟ್ಟಿ ಬೆಳೆದ ಆ ದಿನಗಳ ಚಿತ್ರಗಳು! ಬರೋಬ್ಬರಿ 4 ವರುಷಗಳ ಹಿಂದಿನ ಈ ಚಿತ್ರಗಳ ಪುಟಗಳನ್ನು ತಿರುಚಿದಾಗ ಎನೋ ಖುಶಿ!

ದಿನವುರುಳಿ ಯುಗವಾಗಿ
ಯುಗವೊಂದು ಕ್ಷಣವಾಗಿ
ಕ್ಷಣ-ಕ್ಷಣವು ನೆನಪಾಗಿ
ಅಳಿಯದೆ ಉಳಿದರೆ, ಅದೇ ಬದುಕಿ(ನ/ದ) ಸಾರ್ಥಕತೆ!

ಹೊಸವರುಷ ನಿಮಗೆಲ್ಲ ತರಲಿ ಹರುಷ ಅಂದು ಹಾರೈಸುವ,

ಇಂತೀ ನಿಮ್ಮ ಪ್ರೀತಿಯ,
ಸ್ವರಚಿತ!


Tuesday, December 29, 2009

ಸಿ. ಅಶ್ವಥ್ ಇನ್ನಿಲ್ಲ:-(

ಸ್ವಂತಿಕೆಯ ಗಾಯಕ, 'ಕನ್ನಡವೇ ಸತ್ಯ'ವೆಂದ ಮಹಾನ್ ಚೇತನ, ಹಲವಾರು ಕವಿಗಳ ಪದಗಳಿಗೆ ಜೀವತುಂಬಿದ ಸಿ. ಅಶ್ವಥ್ ಇನ್ನಿಲ್ಲ.

ಗಿಳಿ(ಆತ್ಮ)ಯು ಪಂಜರ(ದೇಹ)ದೊಳಿಲ್ಲ,
ಎಲ್ಲಾ ಮಾಯ, ಇಲ್ಲಿ ನಾವೂ ಮಾಯ!
ಕೋಡಗನ ಕೋಳಿ ನುಂಗಿತ್ತಾ
ಮೈಸೂರು ಮಲ್ಲಿಗೆ, ಶ್ರಾವಣ ಹೀಗೆ ಸಾವಿರಾರು ಹಾಡನ್ನ ನಮಗಿತ್ತು ಮಾಯವಾಗಿದ್ದಾರೆ. ಕಾಣದ ದಾರಿ ತುಳಿದು ಇಹಲೋಕ ತ್ಯಜಿಸಿದ್ದಾರೆ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಕೋರೋಣ. ಮಾಯ ಎಂದ ತಕ್ಷಣ ಯಾವುದೋ ಗೀತೆಯ ಮೂಲಕ ಜೀವಂತವಾಗುತ್ತಾರೆ. ಅವರು ಚಿರಾಯು, ಇನ್ನಿಲ್ಲವಾದರೂ ಬದುಕುತ್ತಾರೆ. ಅವರ ಬದುಕಿನ ಕೆಲ ವರುಷ ನಾನೂ ಜೊತೆಯಲ್ಲಿ ಇದ್ದದ್ದಕ್ಕೆ ಧನ್ಯೋಸ್ಮಿ!

Wednesday, December 16, 2009

myKavana:"ಉಡುಪಿಯಲ್ಲಿ..."

ಎಂದಾದರೊಂದು ದಿನ ನಾನು ಉಡುಪಿಗೆ ಹೊಗಿ
ರಥಬೀದಿಯನು ಅಲೆದು ನೋಡಬೇಕು
ಅಲ್ಲೆ ಎಲ್ಲಾದರು ರಸ್ತೆಪಕ್ಕದಿ ನಿಂತು ಚುರುಮುರಿಯ
ರುಚಿಯನ್ನು ಸವಿಯಬೇಕು

ಚುರುಮುರಿಯ ತಿನ್ನುತ್ತ ಬೀದಿ ಬೀದಿಯನಲೆದು
ಕೈಕಾಲುಗಳು ತುಂಬಾ ಸುಸ್ತಾಗಬೇಕು
ಅಲ್ಲಿರುವ ಎಳೆ ತಾಳೆ ಬೊಂಡ ಕೆತ್ತುತ್ತಲೇ
ಅದರ ಸವಿ ನಾಲಗೆಗೆ ತಿಳಿಯಬೇಕು.

ಒಮ್ಮೆ ಎಂದಾದರು ಬೆಂಗ್ರೆ ಪರಿಸರದಲ್ಲಿ
ಸಂಜೆಯಲಿ ನಾವೆಲ್ಲ ತಿರುಗಬೇಕು.
ನದಿ ಸೇರಿ ಸಾಗರವ ಸೃಷ್ಟಿಸಿಹ ಸ್ವರ್ಗದಲಿ
ತಂಪಾದ ಗಾಳಿ ಸದಾ ಸುಳಿಯಬೇಕು

ಮುಂದೆ ಎಂದಾದರು ಮಲ್ಲಿಗೆಯ ತೋಟದಲಿ
ಅರಳುವಾ ಪರಿಯನ್ನು ನೋಡಬೇಕು
ಕಂಪನ್ನು ಸವಿಯುತ್ತಾ ಮೂರು ಮೊಳ ಮಲ್ಲಿಗೆಯ
ನಲ್ಲೆ ಜಡೆ ತುಂಬಾ ಮುಡಿಸಬೇಕು

ಹೀಗೆ ಎಂದಾದರು ಮಲ್ಪೆ ಕಡಲಿನ ದಡದಿ
ನಾವೆಲ್ಲ ಒಂದು ದಿನ ಕೂಡಬೇಕು,
ಅಲ್ಲಿ ಮರಳಿನ ಮೇಲೆ ಕುಳಿತಿರಲು ತಂಪಾಗಿ
ಸೂರ್ಯದೇವರ ಅಸ್ತ ಕಾಣಬೇಕು

Monday, November 2, 2009

myPOD:"ಮದುವೆ ಮಂಟಪ"

ಯಾರೋ ಮೋಹನ, ಯಾವ ರಾಧೆಯೋ,
ಮದುವೆಗೆ ಸಿದ್ದತೆ ಇಲ್ಲಿ!

myPOD:"ಮದುವೆಗೆ ಹೋಳಿಗೆಯೇ ಶೃಂಗಾರ"

ನೀರಿಗೆ ನೈದಿಲೆ ಶೃಂಗಾರ,
ಹೂವಿಗೆ ದುಂಬಿಯೆ ಶೃಂಗಾರ,
ಸಮುದ್ರಕೆ ತೆರೆಯೇ ಶೃಂಗಾರ,
ಅಂತೆಯೇ,
ಮದುವೆಗೆ ಹೋಳಿಗೆಯೇ ಶೃಂಗಾರ

myPOD:"ಸಾವು - ನೋವು, ಸ್ವಲ್ಪ ಹೆಚ್ಚು ಯಾ ಕಮ್ಮಿ!"

myPOD:"ಶ್ರೀ ರಾಮ ದೇವಾಲಯ"

myPOD:"ಅನ್ನಬ್ರಹ್ಮನ ದೇಗುಲ, ನೋಡಿರಿ ದರ್ಮಸ್ಥಳ!"

myPOD:"ಗಡಾಯಿಕಲ್ಲು: ಬೆಳ್ತಂಗಡಿ"

Thursday, October 22, 2009

myKavana:"ದೀಪದಿಂದ"

ದೀಪದಲ್ಲಿ ದೀಪವ, ದೀಪಕಾಗಿ ದೀಪವ,
ದೀಪದಿಂದ ದೀಪವ, ದೀಪಕೊಂದು ದೀಪವ!

ಹೀಗೇನೇ ನಾ ಬರೆದರೂ, ಕೊನೆಗೆ ಮನದಿ ಉಳಿಯೋ ಲೈನ್,
ಹಚ್ಚಬೇಕು ಮಾನವ;-)

ಯಾಕಂತ ಕೇಳಿದರೆ..... ಬೆಳಗಬೇಕಲ್ಲ ಮನವ?
ಹಾಗಂತ ಅದು ಎಂದೂ, ಸುಡಬಾರದು ವನವ!

ನಾ ಏನೇ ಅಂದ್ರೂ, ನೀವೇಷ್ಟೇ ನೊಂದರೂ, ಬರೆದೆ ನಾನು ಇಲ್ಲಿ ತುಂಬಾ,
ದೀಪದಿಂದ ಪದ್ಯವ:-)

Monday, September 21, 2009

myPOD:"Weekend Snaps"

ಕೇಪುಳೆ ಹೂವು



Who is the JOKER?



Am I TALL enough?

Tuesday, August 18, 2009

myPOD:"Happy World Photographic Day"

Happy World Photography Day... Let's go for green this time to have healthy environment and of-course good subjects for us:-) Wishing you all nice photographic time ahead!



ನಾ ನೆಟ್ಟ ಹಸಿರು, ನೀಡುವುದು ಉಸಿರು!
ನಸುಗೆಂಪು ತುಟಿಯನ್ನ ಇದಕೆ ಯಾರಿಟ್ಟರು?

myKavana:"ನೀರಸ..."

ಚಂದಿರನಿಲ್ಲದ ಆ ದಿನದಿ,
ಹುಡುಕಿದೆ ತಾರೆಯ ಅಕಾಶದಿ.
ಎಡದಲಿ ಇಷ್ಟು, ಬಲದಲಿ ಅಷ್ಟು,
ಎಣಿಸಲು ಬಾರದು ಅಪ್ಪನ ದುಡ್ಡು.

ನಗುವೇ ಇರದ ಈ ಮುಖದಿ,
ಹುಡುಕಿದೆ ಸುಖವ ಜೀವನದಿ.
ಮಳೆಯಲಿ ನಿಂತು ಚೆನ್ನಾಗಿ ಅತ್ತು,
ಅಡಗಿಸಿ ಕಣ್ಣೀರ ಕಷ್ಟ ಪಟ್ಟು.

Monday, August 17, 2009

myPOD:"ಪ್ರಕೃತಿ ವಿಸ್ಮಯ"

ಪ್ರಕೃತಿ ವಿಸ್ಮಯ: ಏನೀ ಮಹದಾಶ್ಚರ್ಯ! ತುಂಡರಿಸಿದ ಬಾಳೆ ಗಿಡ ಗೊನೆ ಹಾಕಿದೆ!



ಜಾಜೀಯ ಹೂ ಅಂದ

Monday, July 13, 2009

myPOD:"ಹಾಗೆ ಸುಮ್ಮನೆ"

ಸಾವಿರಾರು ಚಿತ್ರವನ್ನು ಸೆಳೆದು ಹಿಡಿದರೂ
ಒಂದಾದರು ಉಳಿತೇನು ಕ್ಯಾಮರದಾ ಪಾಲಿಗೆ!
(ಕ್ಯಾಮೆರಾ ಮೆಮರಿ ಅಳಿಸಿ ಹಾಕುವ ಮುನ್ನ ಮನದಿ ಬಂದ ಮಾತು)