ಶಾಲೆಗೆ ಕೈಹಿಡಿದು ರಸ್ತೆಯನ್ನು ಅಡ್ಡದಾಟಿಸುತ್ತಿದ್ದ ನನ್ನ ಅಕ್ಕ ಮೊನ್ನೆ ಹೀಗೆ ಅವಳ ಮನೆಯಲ್ಲಿ ನೋಡಬೇಕಿರೆ ಎಷ್ಟು ದೊಡ್ಡವಳಾಗಿ ಬಿಟ್ಟಿದ್ದಾಳೆ! ಅಂದು ಐಶ್ವರ್ಯ ರೈ ತರ ಮುದ್ದು ಮುದ್ದಾಗಿದ್ದ ಅವಳ ಮೊಗ ಒಂದು ಕ್ಷಣ ನನ್ನನ್ನೆ ನೋಡಿ "ನಿನಗೆ ಕುಡಿವಲೆ ಎಂತ ಅಕ್ಕು" ಎಂದು ಪ್ರೀತಿಯಿಂದ ಕೇಳಿತು...
ಎನಿಲ್ಲ ಎಂದರೂ ಕಳೆದು ಹೊದ 20 ವರ್ಷದ ನೆನಪು ಅಚಾನಕ್ ಆಗಿ ಅಕ್ಕನ ಮನೆಯಲ್ಲಿ ತೆರೆದೇ ಬಿಟ್ಟಿತು.
ಈಗಿನ software engineer ಹುಡುಗಿಯರಂತೆ 22 ವರ್ಷದಲ್ಲಿ ಆಕೆಯ ಮದುವೆ ಅಗಲೇ ಇಲ್ಲ. ಭರೊಬ್ಬರಿ 30 ವರ್ಷ ಒಂಟಿ ಜೀವನ ನಡೆಸಿ ಮತ್ತೆ ಸುಖ ಸಂಸಾರ ನಡೆಸಿದಳು! ಆಶ್ಲೆಷಾ ನಕ್ಶತ್ರ ಒಂದು ಕಾರಣವಾದರೆ ಕಡುಬಡತನದ ಮೂಲ, SSLC ಪಾಸ್ ಆದ ಮುಂದೆ ಓದದ ಕರ್ಮ.. ಚೇ!, ನಾನಾಗ ಹುಟ್ಟಬೇಕಿತ್ತು.. ಅವಳ ಒದಿಸಬೇಕಿತ್ತು!
ನನಗೆ B.E ಮುಗಿದು ಕಾಂಪಸ್ ನಲ್ಲೆ ಕೆಲಸ confirm ಆದಾಗ ನನಗಿಂತ ಜಾಸ್ತಿ ಕುಶಿ ಪಟ್ಟಳಾ ಹುಡುಗಿ.. SSLC ಒದಿಲ್ಲಂದ್ರು ಎನು ಸುಮ್ನೆ ಕೂತೊಳಲ್ಲ.. ತನ್ನ ಡ್ರೆಸ್ಸ್ ತಾನೆ ಹೊಲಿಯುತ್ತಾಳೆ.. ನನಗು ಕೆಲ ಅಂಗಿ ಅವಳು ಹೊಲಿದಿದ್ದಾಳೆ.. ಸೊಪ್ಪು, ಹುಲ್ಲು ಸೌದೆ ತರೊ ಕೆಲ್ಸಂದ ಹಿಡಿದು ಬಾವಿಯಿಂದ ನೀರು ಎತ್ತಿ ತರಕಾರಿ ಬೆಳೆಸೊ ವರೆಗೆ ಎನು ಬೇಕಿದ್ದರು ಮಾಡಬಲ್ಲಳು. ಕಾಲ ಬದಲಾಗಿದೆ.. ಈವಾಗ ಅಂತ ಕೆಲಸ ಯಾರು ಮಾಡಬೇಕಾಗಿಲ್ಲ.. ಮಾಡಿ ಅಂದರೆ ಯಾರಿಗೂ ಬರಲ್ಲ!!
ಇಂದು ನಾ ಅಕ್ಕನ ಮನೆಗೆ ಒಂದೆರಡು ದಿನಕ್ಕೆ ಹೊಗುತ್ರ್ತೇನೆ. ಅವಳ ಕೈಯಡುಗೆ ಅಷ್ಟು ರುಚಿಕರ. ಒಂದು ಹೊತ್ತು ಹೋದರೆ ಹೊದಂತೆ ಅನಿಸುವುದೇ ಇಲ್ಲ.
ಅಕ್ಕನಿಗೆ ಇಬ್ಬರು ಚೂಟಿ ಗಂಡು ಮಕ್ಕಳು.. ಚೆನ್ನಾಗಿ ಒದುತ್ತಿದ್ದಾರೆ.. 7th ವರೆಗೆ ಅವಳೆ ಎಲ್ಲ ಹೇಳಿ ಕೊಡುತ್ತಿದ್ದಳು. ಈಗ English ಅವಕ್ಕೆ ಕಷ್ಟ ಆಗುತ್ತಂತೆ.. ನಾನು English ಕಲಿಯಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದೇನೆ..
ಅಕ್ಕಾ...
ನಿನ್ನೊಲುಮೆಯಿಂದಲೆ ಬಾಳು ಬೆಳಕಾಗಿರಲು ಅಕ್ಕ ನೀ ದೇವತೆ ಎಂದರೆ ತಪ್ಪೇನೆ?
ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು ನಿತ್ಯ ಸುಖಿ ನೀ ಎನಲು ಒಪ್ಪೇನೆ?
ಅಕ್ಕಾಯ ಪಾದೌ ನಮಹ!
ಅಕ್ಕ ಚಾ ತಂದು ಕೈಗಿಡಲು ಅಕ್ಕನ ಮುದ್ದು ಮುಖದಲ್ಲಿ ಮೂಡಿದ ತುಸು ಸುಕ್ಕು ತೊಗಲ ನಗು ನನ್ನ ತುಂಬ ಪೀಡಿಸಿತು.. ಚೆ.. ಅಕ್ಕ ಹಾಗೆ ಇದ್ದಿದ್ದರೆ ಎಷ್ಟು ಚೆನ್ನ... ಯಾಕೆ ಕಾಲ ಉರುಳಿದೆ? ಹೀಗೆ ಚಿಂತಿಸುತ್ತಾ ಡ್ರೆಸ್ಸ್ ಚೇಂಜ್ ಮಾಡಿ ತಲೆ ಬಾಚುತ್ತಿರಲು ನನ್ನ ತಲೆಯಲ್ಲಿ ಒಂದು ಬೆಳ್ಳಿಕೂದಲು ಕುಹಕ ನಗು ಬೀರಿ ನನ್ನ ಸುಮ್ಮನಾಗಿಸಿತು..