Wednesday, December 24, 2008

myInviteReminder:"ಕಳೆದು ಹೋದ ಬಾಳಿನ ನೆನಪಿನಲ್ಲಿ:"

Important Reminder:

We celebrate our marriage on Wednesday, 31th of December, 2008.

See you there!!!

ಆ ದಿನಗಳು.. ಪ್ರತೀ ಕ್ಷಣ, ಹ್ರುದಯದಲ್ಲಿ!
ನೆನೆದಾಗಲೆ ಕುಶಿ, ಎಂದೂ ಮನಸಿನಲ್ಲಿ..
ಇನ್ನೆಂದಿಗೂ ಇದು ಬರೀ.. ಹಳೆಯ ನೆನಪು!
ಮಾಸದೆ ಮರೆಯದೆ ಉಳಿದಿದೆ ಇದರ ಕಂಪು...

ಏನೇನೊ ಹಂಬಲದಿ, ಏನನ್ನೋ ಅರಸುತಿರೆ
ಕಡಲ ತೆರೆಯ ಮಡಿಲಿಗೆ, ಒಲವ ತೀರ ಕರೆಯುತಿರೆ
ಬಾಳುದ್ದ ಈ ಪಯಣ, ಎಲ್ಲೂ ಇಲ್ಲ ನಿಲ್ದಾಣ
ಸಾಗುತ್ತ ಮುನ್ನಡೆವ ಬದುಕಲ್ಲಿ ಕ್ಷಣ-ಕ್ಷಣ!

ಹೊಸ ಮಳೆ, ಹೊಸ ಚಳಿ, ಹೊಸ ಸೆಖೆಗಾಲ
ಅನುದಿನ ಹೊಸತನು ತಾಳಿ ನವ ವರುಷ ಬಂದಿದೆ...
ಹೊಸ ಚಿಗುರು ಅರಳಿರಲು, ಹಳೆ ಬೇರ ನೆನಪಿಸಿದೆ!
ಎಲ್ಲ ಮರೆಯಲಾಗದೆ ಮಾತುನೂರ ಬರೆಯಿಸಿದೆ!

ಹೊಸ ವರುಷದ ಶುಭಾಶಯಗಳು. ಸರ್ವೇ ಜನಾ ಸುಖಿನೋ ಭವಂತು!

Tuesday, December 9, 2008

myPOD:"ಮುಸ್ಸಂಜೆಗೆ ಮಲ್ಪೆಯಲ್ಲಿ"

ಸೂರ್ಯನಳಿದ ಮೇಲೆ ದಿನಕೆ ಚಂದ್ರ ಮಾತ್ರ ಅಲ್ಲವೆ?



ಎಲ್ಲದರಲು ಸುಖವ ಕಾಂಬ ಮಗುವ ಮನಸ ಬಲ್ಲೆವೆ?



ಎನೋ ಇರದ ಶೂನ್ಯದಲ್ಲು ಅಂದ-ಚಂದ ಇಲ್ಲವೆ?

Tuesday, December 2, 2008

Invite for the Big-Day...

The big day of our life is approaching and its our pleasure to invite you to share the beginning of our new life together when we celebrate our marriage on Wednesday, 31th of December, 2008 thirty minutes past Eleven in the morning at Aivarnaadu Temple, Aivarnaadu, Sullia Also To the Vadhoo Grihapravesham On Thursday, 1st Of January, 2009 At Kilarkaje House, Doddathota, Sullia.

Here are some more glimpses!

http://www.mywedding.com/shanakshu/

See you on Big-Day!

Yours,

Shanmukharaja M & Akshatha

Contact numbers
+91 9448625419(M)
+918257262922(R)

Complete address of the Aivarnaadu Temple:
Aivarnaadu Temple
Aivarnaadu,
Sullia Taluk
Dakshina Kannada District
Karnataka state

Complete address of Kilarkaje House:
Kilarkaje House
Post Bollaje, Doddathota
Sullia Taluk
Dakshina Kannada District
Karnataka state

Wednesday, November 19, 2008

myKavana:"Tere naam se jeeloo... Teri deewani!"

ನಿನ್ನ ಹೆಸರಲಿ ಬದುಕಿರುವೆ
ನಿನ್ನ ಹೆಸರಲಿ ನಾ ಸಾಯುವೆನು

ನಿನ್ನ ಹೆಸರಲಿ ಬದುಕಿರುವೆ
ನಿನ್ನ ಹೆಸರಲಿ ನಾ ಸಾಯುವೆನು

ನೀ ಏನು ಮಾಡಿರುವೆ, ಬದುಕಿದ್ದು ಸತ್ತಿರುವೆ, ಏನ್ರೀ, ಹೂನ್ರೀ,
ನಾ ಆಗಿರುವೆ, ನಿನ್ನ ಹುಚ್ಚ, ನಿನ್ನ ಹುಚ್ಚ!

... to be continued!

Monday, November 17, 2008

myKavana:"ಮತ್ತೆ ಅರಳೀತೆ ಪ್ರೀತಿ?"

ಮಳೆಯಿಲ್ಲ
ತಂಪಿಲ್ಲ
ಮೋಡವಿಲ್ಲ
ನೀರಿಲ್ಲ
ಸಿಡಿಲಿಲ್ಲ
ಗುಡುಗೂ ಇಲ್ಲ
ವಿದ್ಯುತ್ತಿಲ್ಲ

ಇರುವುದೆಲ್ಲ ಒಂದೇ
ಬದುಕಬೇಕೆಂದೇ
ಬದುಕಬೇಕಿರಲು
ಇವು ಎಲ್ಲ ಇರಬೇಕು ತಾನೆ!

ಅವಳಿಲ್ಲ
ನಗುವಿಲ್ಲ
ಪ್ರೀತಿ ಇಲ್ಲ
ಮಾತೂ ಇಲ್ಲ
ದ್ವೇಶ ಇಲ್ಲ
ಮನಸಿಲ್ಲ
ಕನಸೂ ಇಲ್ಲ

ಮೌನ ಒಂದಿರಲು
ಮಾತುಬರದಿರಲು
ಜೊತೆ ಬದುಕಬೇಕಿರಲು
ಹೇಗೇ ಮೂಡೀತು ಪ್ರೇಮ!

Friday, November 14, 2008

myHarate:"ಕೆಲಸಕ್ಕಾಗಿ ಬದುಕುವುದಾ ಅಲ್ಲ ಬದುಕಲು ಕೆಲಸ ಮಾಡುವುದಾ?"

Sent by one of my friend:

Chacha kaise ho ???

Chacha: ab kya batau....
Bada beta share broker hai...
Dusara beta Jet Airways me hai
Tisara bank me hai aur
Choutha Software me hai


sabse chhota PANWALA hai...
…… Bus Wohi ghar chala raha hai....

And its my reply to that mail:

ತುಂಬಾ ಮಾರ್ಮಿಕವಾದ ಮಾತು. ಎನೇನೋ ಕಲಿತು, ಊರಲ್ಲಿದ್ದು ಎನೂ ಮಾಡಲಾಗದೆ ಕೆಲಸಕ್ಕಾಗಿ ಊರು ಬಿಡೋದು, ಎನೂ ಕಲಿಯದೆ ಊರಲ್ಲೇ ಇದ್ದು ಕೆಲಸವನ್ನು ಕಂಡುಕೊಳ್ಳುವುದು ಮತ್ತು ಇನ್ನೊಂದು ವರ್ಗ ಎಲ್ಲ ಕಲಿತು ಊರಲ್ಲೇ ಕೆಲಸ ಕಂಡುಕೊಳ್ಳುವುದು. ಹಮ್, ಎಲ್ಲ ನೋಡುವಾಗ ನನಗೆ ಮೂಡುವ ಒಂದೇ ಒಂದು ಪ್ರಶ್ನೆ, ಕೆಲಸಕ್ಕಾಗಿ ಬದುಕುವುದಾ ಅಲ್ಲ ಬದುಕಲು ಕೆಲಸ ಮಾಡುವುದಾ?

ಉತ್ತರ ಸಿಕ್ಕಿಲ್ಲ! ಆದರೆ ಇದೆರಡೂ ಅಸಮರ್ಪಕ. ಬದುಕುವುದು ಇನ್ನೇನಕ್ಕೋ ಅಂತ ತಿಳಿಯುತ್ತಿದೆ!

Thursday, November 13, 2008

myKavana:"ಅವಳಂದ್ರೇ..."

ಮಾತಲ್ಲಿ ಮುಗ್ಗರಿಸಿ ಎಲ್ಲವನು ಮರೆತಾಗ
ಪದವನ್ನು ತಂದವಳು ನೀನಲ್ಲವಾ?
ನಮ್ಮೂರ ಸಂತೆಯಲಿ ಮಂಡಕ್ಕಿ ಉಪ್ಕರಿಗೆ
ಚೌಕಾಶಿ ಮಾಡೋಳು ನೀನಲ್ಲವಾ?

ಬ್ರೇಕಲ್ಲಿ ಕಾಲಿಟ್ಟು ಸ್ಲೋ ಆಗಿ ಹೋದಾಗ
"ನಿಧಾನ!.." ಅನ್ನೋಳು ನೀನೆ ಅಲ್ಲವಾ?
ನದಿಯನ್ನು ಕಂಡಾಗ ದಡದಲ್ಲಿ ನಿಂತಾಗ
ಎದೆಯಲ್ಲಿ ಕಂಪನವು ನಿನಗಲ್ಲವಾ?

ಇರುಳಿರಲಿ ಹಗಲಿರಲಿ ಪ್ರತಿಕ್ಷಣವು ಮನಸಿನಲಿ
ನೆನಪಿಸುತಾ ನೆನೆದವಳು ನೀನಲ್ಲವಾ?
ಮನೆತುಂಬಾ ಕಲರವವ ಮನತುಂಬಾ ಸಂತಸವಾ
ಕಂಡೋಳು, ತಂದೋಳು ನೀನಲ್ಲವಾ?

Tuesday, November 4, 2008

myKavana:"ಸವಿಯಾದ ಮಾತಲ್ಲಿ"

ಸವಿಯಾದ ಮಾತಲ್ಲಿ
ಕಹಿಯಾದ ನೆನಪೇ ಇರದು
ಪ್ರೀತಿತುಂಬಿದ ಎದೆಯಲಿ
ವಿರಹದ ಕನಸೇ ಬರದು

ನಿನ್ನ ನೆನಪು ಅಲ್ಲಿ-ಇಲ್ಲಿ
ಮರೆತುಬಿಡಲು ಮದ್ದೇ ಇರದು
ಇರಲು ಸವಿ ಎಂದಿಗು ಬದುಕಲಿ
ಬದುಕುವಾಸೆ ಯಾರಿಗೆ ಬರದು?

Thursday, October 30, 2008

myPOD:"ಪಾತರಗಿತ್ತಿ ಪಕ್ಕ!"

ನೂರು ಬಣ್ಣಾ ಬಣ್ಣ, ನಡುವೆ ನವಿಲಗಣ್ಣ
ರೇಶಿಮೆ ಹಾಗೆ ನಯ, ಮುಟ್ಟಲಾರೆ ಭಯ!


myPOD:"ಶೃಂಗೇರಿ"


Wednesday, October 22, 2008

myKavana:"ಹೀಗೇ ಹರಟಿದ್ದು"

ನೀ ಮಲ್ಲಿಗೆ, ಮೆಲ್ಲ ಬಳಿಬಂದಿಹೆ
ಅರಳುತ ನನಗೆ ನೀನು ನೆನಪ ಕಾಡಿದೆ
ಬಾಳದಾರಿಯೆ ಇನ್ನೂ ನಡೆಯೆಂದಿದೆ
ನಡುದಾರಿಲಿ ಈಗ ನಡೆದಾಗಿದೆ
ಹಿಂದಿರುಗಿದರೆ ಇನ್ನು ನೋವೊಂದೇ ಇದೆ
ಮುಂದೆ ಮತ್ತೆ ನಗುವೆಂಬ ಕನಸು ಕಾದಿದೆ!

Thursday, October 16, 2008

myKavana:"ಕಾಳಜಿ"

ಮೂಗಿನಾ ಮ್ಯಾಲಿನಾ ಚಿನ್ನವೇ,
ಅವಳ ಮೂಗ ನೋಯಬೇಡವೆ!
ಕುತ್ತಿಗೆಯ ಕೆಳಗಿಳಿದ ಪದಕವೇ,
ಅವಳ ಕೊರಳ ನೋಯಬೇಡವೆ!

ನೀಳಜಡೆಯ ಬಿಗಿದಿಟ್ಟ ಬಳ್ಳಿಯೇ,
ಅವಳ ಉಸಿರಹಿಡಿಯಬೇಡವೇ!
ಕಿವಿಯ ತೂತ ಹಿಡಿದಿಟ್ಟ ಓಲೆಯೇ,
ಅವಳ ನೋವು ನಿನ್ನದಲ್ಲವೇ?

ಕಾಲ ಸುತ್ತ ಬದುಕುವಂತ ಗೆಜ್ಜೆಯೇ,
ನಿಮ್ಮ ಭಾರ ಅವಳಿಗಲ್ಲವೇ?
ನೀವು ಎಲ್ಲ ಸೇರಿ ಅವಳು ನೊಂದರೂ,
ಅವಳ ಅಂದ ನನಗೇ ಅಲ್ಲವೆ!

Monday, October 13, 2008

myPOD:"ಸುಂದರಸಂಜೆ"

myPOD:"ಮತ್ಸ್ಯತೀರ್ಥ"

myPOD:"ದ್ರಾಕ್ಷಿ"

myKavana:"ನೀ ಬಾರೆ ಇಲ್ಲಿ"

ಒಂದು ಸಿಹಿಯ ನೋವ ಕೊಡಲು
ನೀ ಬಾರೆ ಇಲ್ಲಿ
ನಡು ಇರುಳು ಚಳಿಯ ನಡುವೆ
ನೀ ಬಾರೆ ಇಲ್ಲಿ

ತಾರೆ ಇಲ್ಲ, ಚಂದ್ರಮನು ಇಲ್ಲ
ನೀನಿರದೆ ಏನೂ ಇಲ್ಲ
ನಿದಿರೆ ಇಲ್ಲ, ಸಿಹಿಗನಸೂ ಇಲ್ಲ
ನೀಬರದೆ ಏನೂ ಇಲ್ಲ

ಮುಂಗುರುಳ ಗಾಳಿಲಿಟ್ಟು
ನೀ ಬಾರೆ ಇಲ್ಲಿ
ನಗುವ ಮುಖದಿ ತೊಟ್ಟು
ನೀ ಬಾರೆ ಇಲ್ಲಿ

ಒಂದು ಸಿಹಿಯ ನೋವ ಕೊಡಲು
ನೀ ಬಾರೆ ಇಲ್ಲಿ
ನಡು ಇರುಳು ಚಳಿಯ ನಡುವೆ
ನೀ ಬಾರೆ ಇಲ್ಲಿ

Friday, October 3, 2008

myKavana:"ಗೆಳತಿಗಾಗಿ"

ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಾಲಿ
ಪ್ರೀತೀ ಸ್ನೆಹಾನ ಬೆಳೆಸೋಳಾ, ನನಗೆ
ಶುಭವನ್ನೆ ಕೋರೋ ಗೆಳತೀಯ!

ಮದ್ಯಾಹ್ನ ನಾನುಂಡು ಯಾರ್ಯಾರ ನೆನೆಯಾಲಿ
ಮನದಲ್ಲಿ ಸಂತಸಾ ತಂದೋಳಾ, ನನ್ನಲ್ಲಿ
ಬದುಕುವಾ ಆಸೆ ಬೆಳೆಸೋಳಾ!

ರಾತ್ರೆ ನಾಮತ್ತೆ ಯಾರ್ಯಾರ ನೆನೆಯಾಲಿ
ನನ್ನನ್ನೆ ಉಸಿರಲ್ಲಿ ತುಂಬೋಳಾ, ನನಗಾಗಿ
ಎಲ್ಲಾನೂ ಬಿಟ್ಟಿರುವ ಹುಡುಗೀಯ!

Monday, September 22, 2008

myKavana:"ಪ್ರೀತಿ ಪ್ರೇಮ"

ಸಖಿ ನೀ ಸಾಕಿದ ಪ್ರೀತಿ ಪ್ರೇಮ
ಮರೆತಂತೆ ನೆನಪಾಗೋದು ಏನೀ ಮರ್ಮ
ನಕ್ಕು ಮತ್ತೆ ಅಳೊದು ನಮ್ಮ ಕರ್ಮ?
ಹೂವಾಗಿ ಬಾಡೋದೇ ಜಗದ ನಿಯಮ?

ಮನದಲ್ಲಿ ನಿನ್ನದೇ ಕೈಬಳೆ ಸದ್ದು
ಸಂತೆಯಲಿ ನಕ್ಕಿದ್ದು ನಾವ್ ಬಿದ್ದು ಬಿದ್ದು
ಬರೆದೆ ಚಿತ್ರ ನಿಂದು ಕದ್ದು ಕದ್ದು
ಇದನೆಲ್ಲ ಮರೆಯಲು ಯಾವ ಮದ್ದು?

ನಿನ್ನ ಕಷ್ಟ ನಿನ್ನ ನೋವು
ಯಾಕೆ ನನಗೆ ಕಹಿಬೇವು?
ನಲಿವು ಮತ್ತು ಮಾತ್ರ ಸುಖವು
ಇರೆ ತಾನೆ ಜೊತೆಗೆ ನಾವು?

ಸಖಿ ನೀ ಸಾಕಿದ ಪ್ರೀತಿ ಪ್ರೇಮ
ಮರೆತಂತೆ ನೆನಪಾಗೋದು ಏನೀ ಮರ್ಮ
ನಕ್ಕು ಮತ್ತೆ ಅಳೊದು ನಮ್ಮ ಕರ್ಮ?
ಹೂವಾಗಿ ಬಾಡೋದೇ ಜಗದ ನಿಯಮ?

myPOD:"ಮಂಜುಮುಸುಕಿದ ದಾರಿಯಲ್ಲಿ"



myPOD:"ಹೂವು ಒಂದು, ದೃಷ್ಟಿ ಮೂರು!"



Tuesday, September 16, 2008

myHarate:"ಸಾವ ಏಕೆ ನಾವು ಕರೆವದು?"

ಮಂಗಳೂರಿನಲ್ಲಿ ನೆಡೆಯುತ್ತಿರುವ ಕೋಮು ಗಲಭೆಯ ಬಗ್ಗೆ ವಿಷಾದದಿಂದ...

ಜ್ನಾನವೆಂಬ ದೀಪವಾ ಹಚ್ಚಬೇಕು ಮಾನವ
ಅರಿವು ಎಂಬ ಬೆಳಕು ನೀಡಲು...
ಪರರ ಜೀವ ಕೊಲ್ಲಲು ಬೆಂಕಿ ಏಕೆ ಉರಿವುದು?
ಹೋದ ಜೀವಕಷ್ಟೆತಾನೆ ಬೆಂಕಿಬೇಕಿರುವುದು?

ಜೀವ ಉಳಿಸಲೊಲ್ಲೆವು ತೆಗೆವದೆಷ್ಟೆ ಬಲ್ಲೆವು?
ಹೋದ ಜೀವ ಎಂದು ಮರಳದು...
ಜೀವ ಜೀವದಾಸೆ ಎಂದೂ ಮುಪ್ಪಾಗಿ ಸಾವದು,
ಇಲ್ಲಿ ಸಾವ ಏಕೆ ನಾವು ಕರೆವದು?

ಮನೆಯಲ್ಲಿ ಹೊಸತಾಗಿ ಹಾಕಿಸಿದ ಸೋಲಾರ್ ಲಾಂಪಿನ ಫೋಟೊ....



ಹೂವೆ ಹೂವೇ!



ಮುಳ್ಳುಸೌತೆಯ ಬಾಲ್ಯ


ಉಂಡಲಕಾಳು

Thursday, September 11, 2008

myHarate:"ಯಾರೋ ಮೋಹನ ಯಾವ ರಾಧೆಗೋ ಪಡುತಿಹರು ಪರಿತಾಪ!"

ಯಾರೋ ಮೋಹನ ಯಾವ ರಾಧೆಗೋ ಪಡುತಿಹರು ಪರಿತಾಪ!

ಸಾಹಿತ್ಯ ಮನಕಲಕುತ್ತೆ, ಮನವ ಗೆಲ್ಲುತ್ತೆ, ಮನಕ್ಕೆ ಹಚ್ಚಿಬಿಡುತ್ತೆ! ಎಲ್ಲರ ಬದುಕಿಗೂ ಎಷ್ಟು ಸಮೀಪವಾಗಿದೆ ಈ ಪದಗಳು! ಮೋಹನ ಯಾರು ಅಂತ ಗೊತ್ತಿಲ್ಲ! ರಾಧೆ ಯಾರೆಂದು ಮೊದಲೇ ತಿಳಿದಿಲ್ಲ. ಅದರೂ ಈ ವಾಕ್ಯ ಓದಿದಾಗ ನಮ್ಮಲ್ಲೆ ಯಾರೋ ಮೊಹನರಾಗುತ್ತಾರೆ, ಅವರ ಮನದನ್ಯೆ ರಾಧೆಯಾಗುತ್ತಾಳೆ! ಇಬ್ಬರು ಪ್ರೀತಿಯ ಪ್ರತೀಕವಾಗಿದ್ದಾರೆ, ಆದರೆ ಇಬ್ಬರು ಎನೋ ಕಾರಣಕ್ಕೆ ಪಡುತಿಹರು (ರು - ಅಂದರೆ ಇಬ್ಬರು!) ಪರಿತಾಪ!! ವಿರಹವನ್ನ, ಪ್ರೀತಿಯನ್ನ ಹೀಗೆ ಸಿಂಪಲ್ಲಾಗಿ ಒಂದು ಲೈನಲ್ಲಿ ಹೇಳಲಾಗುತ್ತೆ ಅಂತ ಇಂದಷ್ಟೇ ನನಗೆ ತಿಳಿಯಿತು!

ಹಾಗೆ ಹೇಳುತ್ತಾ ಕೊನೆಗೊಮ್ಮೆ,

ಲೋಕದ ಕಣ್ಣಿಗೆ ರಾಧೆಯು ಕೂಡಾ ಎಲ್ಲರಂತೆ ಒಂದು ಹೆಣ್ಣು!
ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯ ನೀಡುವ ಕಣ್ಣು!

ಅಂದಹಾಗೆ,
ಈ ಯಾರೋ ಮೀರಾ, ಯಾರೋ ಮಾಧವ, ಯಾರೋ ಮೋಹನ ಯಾವ ರಾಧೆಯೋ ಎಲ್ಲ ಪ್ರೀತಿಯ ರೀತಿಯ ನೆನಪಿಸಲೆ?

myKavana:"Morning Walk"

ಹೋಗುತ್ತಿದ್ದೆ ನಾನು ಅಂದು
ಜೋತೆಗೆ ನನ್ನ ಸ್ನೇಹಿಗಳು
ನನಗೋ ಆಗ ಅರ್ಧ ನಿದಿರೆ!

ಅಂದಿನಂತೆ ದಿನವೂ ಇಂದು
ಹೋಗುತ್ತೇವೆ ನಾನು ಮತ್ತು ನೆರಳು
ನೆರಳು ಮಾತ್ರ ಸೂರ್ಯನಿರೆ!

Sunday, September 7, 2008

myKavana:"ನಗು ನೀ ನಗು"

ನಗು ನೀ ನಗು, ಅಳುವುದ ಮರೆತು
ತಾ ಖುಷಿ ನನಗು, ಮನದಲಿ ಬೆರೆತು
ನಲಿಯುತ ನೋವ ಮರೆವುದ ಕಲಿತು
ನಾನಿರಬೇಕು ನಿನ್ನನು ಅರಿತು!!

ನವಿಲಿನ ನಾಟ್ಯಕೆ ನೀನೆಯೆ ಸ್ಪೂರ್ತಿ
ಕೂಗಿಲೆ ಕೂಗಿದೆ ನೀ ಮೀಟಲು ತಂತಿ
ಚಂದ್ರಮ ಮುಖದಲಿ ನಿನ್ನದೆ ಕಾಂತಿ
ನೀ ನನಗಾಗಿರೆ ಬೇರೆಲ್ಲಕು ಇಂತಿ

ವಿಷವೂ ಸಿಹಿಯೇ ಜೇನಲಿ ಬೆರೆತರೆ
ಜೇನೂ ವಿಷವೇ ಸಿಹಿ ಕಹಿಯಾದರೆ
ಸ್ನೇಹಿಯೆ ನಿನ್ನಯ ಪ್ರೀತಿಯ ಹಾರದಿ
ಕಹಿ ಸಿಹಿ ಆಗಿದೆ ಜೀವನದಿ

myPOD:"ಮೊಗ್ಗಿನ ಕನಸು"



Wednesday, September 3, 2008

myKavana:"Jaane tu yaa jaane naa!"

ಹೇಳು ನೀ ನನಗೆ, ಏನು ನಮಗೆ ಆಗಿತ್ತು?
ನೀನು ನನ್ನ ಕ್ಷಣವೂ, ನೀನೆ ಈ ಜೀವನವೂ!
ಉಸಿರು ಈಗ ಬಿಗಿ ಹಿಡಿದು, ಹೊಳಪೇ ಕಣ್ಣಲ್ಲಿ ಇಲ್ಲ!
ಹೇ ಸ್ನೇಹವು ಒಂದೇ ಇತ್ತು, ಮತ್ತೇನು ನಮ್ಮಲಿ ಇತ್ತು?
ಯಾಕೆ ಎದೆಯಲಿ ನೋವು, ಹ್ರುದಯ ಒಡೆದಿದೆ ಇಂದು
ಹೇ ಸ್ನೇಹಿಯು ನೀನು ಆದೆ, ಅದಕಿಂತ ಮತ್ತೇನು ಇತ್ತು?
ಹೇಳು ನೀ ನನಗೆ ಇದು ಹೌದು ಅಥವಾ ಅಲ್ಲ!

ಓ ಸ್ನೇಹಿ ಏ ಸ್ನೇಹಿ ನೀಯಾಕೆ ಮೌನವಾದೆ?
ನೀ ಹೇಳು ಇದುವೇ ಪ್ರೀತಿ, ಹೌದು ಅಥವಾ ಅಲ್ಲ?

Monday, September 1, 2008

Monday, August 25, 2008

myAnisike:"ಲೋಕದ ಕಣ್ಣಿಗೆ..."

ಡಾ|| ಹೆಚ್ ಯೆಸ್ ವೆಂಕಟೇಶ್ ಮೂರ್ತಿ ಅವರ "ಲೋಕದ ಕಣ್ಣಿಗೆ ರಾಧೆಯು ಕೂಡ" ನನಗನ್ನಿಸಿದಂತೆ:

ಲೋಕದ ಕಣ್ಣಿಗೆ ನನ್ನಾಕೆಯು ಕೂಡಾ ಎಲ್ಲರಂತೆ ಒಂದು ಹೆಣ್ಣು!
ನನಗೆ ಮಾತ್ರ ಆಕೆಯು ಎಂದೂ ಪ್ರೀತಿಯ ನೀಡುವ ಕಣ್ಣು!

ನಾನು ನನ್ನದು ನನ್ನವರೆಂಬ ಹಲವು ತೊಡಕುಗಳ ಮೀರಿ,
ಆಕೆಯು ತರುವಳು ಪ್ರೀತಿ!
ತೊರೆದರು ಕಣ್ಣ ತೊರೆಯದು ಪ್ರಿಯನ,
ಇದು ಆಕೆಯ ಪ್ರೀತಿಯ ರೀತಿ!!!!

ಲೋಕದ ಕಣ್ಣಿಗೆ ನನ್ನಾಕೆಯು ಕೂಡಾ ಎಲ್ಲರಂತೆ ಒಂದು ಹೆಣ್ಣು!
ನನಗೆ ಮಾತ್ರ ಆಕೆಯು ಎಂದೂ ಪ್ರೀತಿಯ ನೀಡುವ ಕಣ್ಣು!

Saturday, August 23, 2008

myPOD:"The plug say's it!!!"


myHarate:"ಗುಂಡ"

'ಗುಂಡ' ಎಂಬ ಪದಕ್ಕೆ ತುಂಬಾನೆ ಅರ್ತ ಇದೆ ಕಣ್ರೀ. ಹೋಟೆಲಲ್ಲಿ ಗುಂಡಾ ಅಂತ ಕಿರಿಚಿದರೆ ಮಾಣಿಯ ಕೂಗಿದ್ದು ಎಂದು ತಿಳಿದರೆ ನಿಮ್ಮಷ್ಟು ಪೆದ್ದ ಬೇರ್ಯಾರು ಇಲ್ಲ.

ಗುಂಡಾ ಎಂದರೆ ಹಸಿವೆಯು ಪರಿಹಾರ
ಗುಂಡಾ ಎನಬಾರದೆ, ನೀವು ಗುಂಡಾ ಎನಬಾರದೆ!!!

ಹೌದು, ಹಲಸಿನ ಎಲೆಯನ್ನು ಸುತ್ತಲು ಸೇರಿಸಿ ಮಾಡಿದ ಗ್ಲಾಸ್ ನಂತಿರೋ ಇಡ್ಲಿಗೆ ಗುಂಡಾ ಎಂದೂ ಕರೆಯುವರು. 'ಪೆಲಕ್ಕಯಿತ ಇರೆತ್ತ ಅಡ್ಯೆ' ಅಂತ ತುಳುವಲ್ಲಿ ಎನ್ನಬಹುದೋ ಎನೋ!

ಅಜ್ಜಿ ಹೇಳುತ್ತಿದ್ದ ಸುಟ್ಟವು ಮರದ ಕಲ್ಪನೆಯ ಕತೆಯನ್ನು ನೆನಪಿಸುತ್ತಾ ಈ ಗುಂಡನ ಬಗ್ಗೆ ತಿಳಿಯದ ನನ್ನ ಸ್ನೇಹಿತನಿಗೆ ನಾನು ಹೇಳಿದ್ದು ಇಷ್ಟು!

ಉಡುಪಿಯ ಕೃಷ್ಣಮಟದ ಸುತ್ತ ಇರುವ ರಥಬೀದಿಯಲ್ಲಿ ಸಾಕಷ್ಟು 'ಗುಂಡ' ಮರಗಳು ಇರುವುದಾಗಿಯೂ, ಹೋದ ಭಕ್ತರು ಮರದಸುತ್ತ ಸುತ್ತುಬಂದು ಮರವ ಕುಲುಕಿಸಲು ಗುಂಡ ಬೀಳುವುದಾಗಿಯೂ, ಭಕ್ತಾದಿಗಳು ಗುಂಡ ಸಂಗ್ರಹಣೆಗೆ ಮುಗಿಬೀಳುವುದಾಯೂ, ಪಕ್ಕದಲ್ಲೆ ಗೋಚರಿಸುವ ಚಕ್ಕುಲಿಮರದಲ್ಲಿ ಚಕ್ಕುಲಿ ಜಗಮಗಿಸುವುದಾಗಿಯೂ, ಚಕ್ಕುಲಿ ಮರದಲ್ಲಿ ಬಿಲ್ವಪತ್ರೆ ಮರದಂತೆ ದೊಡ್ಡ ದೊಡ್ಡ ಮುಳ್ಳುಗಳಿರುವುದಾಗಿಯೂ, ಚಕ್ಕುಲಿ ಕಾಯಿಯಾಗಿರಲು ತುಂಬಾ krispy ಇರುವುದಾಗಿಯೂ, ಹಣ್ಣಗುತ್ತಲೇ ಮೆತ್ತಗಾಗುವುದಾಗಿಯಿಯೂ 'ರೈಲು' ಬಿಡುತ್ತಿರೆ ಆತನಿಗೆ ನಿಜದ ಅರಿವಾಗಿ good narration dude ಎಂದಷ್ಟೆ ಹೇಳಿದಾಗ ನಾವಿಬ್ಬರು ಗಟ್ಟಿ ನಕ್ಕೆವು!!! ಅಜ್ಜಿಯ ಸುಟ್ಟವಿನ ಕತೆಗೆ ನಿದ್ದೆಬರುತ್ತಿದ್ದರೆ, ನನ್ನ ಗುಂಡಾ ಕತೆಗೆ ನಗುವಾದರು ಬಂತಲ್ಲಾ ಅಂದು ನನ್ನ ಕಲ್ಪನೆಗೆ ದನ್ಯವಾದ ತಿಳಿಸಿದೆ!

myHarate:"ಪಟ್ಟದ ಆನೆ ಸುಭದ್ರೆ ಅಂದಿದ್ದು"

ಕೃಷ್ಣ ಮಠದ ಪಟ್ಟದ ಆನೆ ಸುಭದ್ರೆ ಅಂದಿದ್ದು:
ರಾಜಾಂಗಣದ ಪಕ್ಕದಲ್ಲಿ ನನ್ನ ಮನೆ. ಉಡುಪಿಯ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನ ಚಾಚೂ ತಪ್ಪದೆ ಆಲಿಸುವ ಭಾಗ್ಯ ನನ್ನ ಪಾಲಿಂದು. ಎಷ್ಟೊ ಜನ ವಿದ್ವಾಂಸರು, ವಿದ್ವಾನುಗಳು, ಕಲಾಮಣಿಗಳು ರಾಜಾಂಗಣದಲ್ಲಿ ಕಾರ್ಯಕ್ರಮಕೊಡುತ್ತಲೇ ಇರುತ್ತಾರೆ. ಇವೆಲ್ಲವನ್ನು ಕಣ್ಣಾರೆ ಕಾಣಲು ನಾನು ತುಂಬಾ ಅದೃಷ್ಟಮಾಡಿರಬೇಕು. ಇಲ್ಲಿ ಸರ್ವ ಕಲಾವಲ್ಲಭರು ಬರುತ್ತಾರೆ, ಹಾಡುತ್ತಾರೆ, ನಾಚುತ್ತಾರೆ, ನುಡಿಸುತ್ತಾರೆ. ಇಲ್ಲಿಗೆ ಬರುವ ಪ್ರೇಕ್ಷಕರು ಬರಿಗೈಯಲ್ಲಿ ಬಂದು ಮನತುಂಬ ಕುಷಿಪಟ್ಟು ಹಾಗೆ ಹೋಗಬಹುದು. ದೊಡ್ಡ ಪ್ರಾಂಗಣ.. ಸಾವಿರಗಟ್ಟಲೆ ಜನ ಏಕಕಾಲಕ್ಕೆ ಕುಳಿತುಕೊಳ್ಳಬಹುದಾದ ಸುವ್ಯವಸ್ತೆ.

ಮೊನ್ನೆ ಬಂದ ಗೋಡ್ಕಿಂಡಿಯವರು ಮಿಶ್ರ ಪಹಾಡಿ ರಾಗದಲ್ಲಿ ಬೆಟ್ಟ ಗುಡ್ಡದ ಮೇಲಿನ ವಾತಾವರಣವನ್ನು ಸೃಷ್ಟಿಸಿರೆ ಎಲ್ಲೊ ಗತಕಾಲದ ವೈಭವ ನಂಗೆ ಮತ್ತೆ ಬಂದಂತಾಯಿತು. ನನ್ನ ಹುಟ್ಟೂರಲ್ಲಿ ಇದ್ದ ಸೀತಾನದಿ, ಅದನ್ನು ಸೇರುವ ಕಿರುತೊರೆಗಳಲ್ಲಿನ ನಮ್ಮ ಜಳಕ, ಅಲ್ಲಿ ಬೀಸೋ ಗಾಳಿ, ಬೆಳಗಾತ ಕೇಳುತ್ತಿದ್ದ ಕೋಗಿಲೆಯ ಇನಿದನಿ, ಅದಕ್ಕೆ ಬೆಟ್ಟದಲ್ಲಿನ ಪ್ರತಿದ್ವನಿ ಕೇಳುತ್ತಿರೆ ನಾನು ಮತ್ತೆ ಸ್ವತಂತ್ರಳಾಗಿ ಬೆಟ್ಟ ಗುಡ್ಡದಲ್ಲಿ ವಿಹರಿಸಿದ ಸಂಭ್ರಮ. ಇಂತಹ ದಿನಗಳು ನನಗೆ ಸಿಗುವುದು ಬಹಳ ಅಪರೂಪ. ದಿನಾ ರಥದ ಎದುರು ಹೊಗಿ ಕಿವಿ ಹೊಟ್ಟುವ ಸಿಡಿಮದ್ದುಗಳೆದುರು ಕೂರಬೇಕಾದ ವ್ಯಥೆ ನನ್ನದು. ಹೀಗಿರಲು ಈ ಅಸ್ತಾನ ವಿದ್ವಾನ್ ಗೋಡ್ಕಿಂಡಿ ನನ್ನ ಪಾಲಿಗೆ ಮರೆಯಾಗದ ನೆನಪುಗಳನ್ನ ತಂದು ಅಷ್ಟಮಿಯ ಹಬ್ಬದ ವಾತಾವರಣ ನನ್ನಲ್ಲು ಬರುವಂತೆ ಮಾಡಿದ.

ಯಾರು ಬರಲಿ ಬಾರದಿರಲಿ ನಾನಂತು ಕಲಾಪ್ರೊತ್ಸಾಹಕನಾಗಿ ಪ್ರತಿನಿತ್ಯ ಗೋಡೆತರ ನಿಂತು ಕ್ರಾಯಕ್ರಮ ಆಸ್ವಾದಿಸಿ ಎಲ್ಲರ ಬೆನ್ನು ತಟ್ಟುತ್ತೇನೆ. ಹೀಗೆಮಾಡುವುದರಲ್ಲಿ ನಾನು ತುಂಬಾ ಸಂತಸ ಕಾಣುತ್ತೇನೆ. ನನ್ನ ಈ ನಿಂತ ನೀರಿನಂತಹ, ನಿಂತಲ್ಲೆ ಅನುಭವಿಸಬೇಕಾದಂತಹ, ಕೃತಕ ಬದುಕು ಇದರಿಂದ ಸಾರ್ತವಾಗುತ್ತೆ ಅಂತ ತಿಳಿದುಕೊಳ್ಳುತ್ತೇನೆ.

Thursday, August 21, 2008

myPOD:"ಮುಂಗಾರು ಟೈಮ್"

ಮೂಗಿಗಿಂತ ದೊಡ್ಡ ಮೀಸೆ!



ಮುಂಗಾರು ಟೈಮ್...



ಮುಂಜಾನೆಯ ಮಂಜಹನಿ...



ಚೆಲ್ಲಿದರು ಮಲ್ಲಿಗೆಯಾ...



ಚೆಗುರಿಗೆ ಬೇರಿನಾ ಬೆಂಬಲಾ...



ಮಾಯದಂತ ಮಳೆ ಬಂತಣ್ಣಾ...



ಚೆಗುರಿಗೆ ಬೇರಿನಾ ಬೆಂಬಲಾ...