Monday, August 20, 2007

myKavana:"Is pyaar ko mai kyaa naam doon?"

"ಮುಝೆ ಕುಚ್ ಕೆಹ್ನಾ ಹೈ" ಯ ಸುಮಧುರ ಟ್ರಾಕ್ ಕನ್ನಡದಲ್ಲಿ! ಲಾಯಕ್ ಆಗದಿದ್ದಲ್ಲಿ ಕ್ಷಮೆಯಿರಲಿ!

ರಬ್ಬಾ ಎನ್ನ ರಬ್ಬ ರಬ್ಬಾ
ರಬ್ಬಾ ಎನ್ನ ರಬ್ಬ!
ರಬ್ಬಾ ಎನ್ನ ರಬ್ಬ ರಬ್ಬಾ
ರಬ್ಬಾ ಎನ್ನ ರಬ್ಬ!

ಈ ಪ್ರೀತಿಯ ನಾ ಏನೆನ್ನಲಿ?
ಒಲವಿನ ಹ್ರುದಯವ ಹೇಗೆ ಸಂತೈಸಲಿ!

ರಬ್ಬಾ ಎನ್ನ ರಬ್ಬ ರಬ್ಬಾ
ರಬ್ಬಾ ಎನ್ನ ರಬ್ಬ!
ರಬ್ಬಾ ಎನ್ನ ರಬ್ಬ ರಬ್ಬಾ
ರಬ್ಬಾ ಎನ್ನ ರಬ್ಬ!

ನಾ ಹಗಲಿರುಳು ಎಂದು ನಿನ್ನಯ ಪ್ರೀತಿಲಿ ಬದುಕಿರುವೆ
ನಿನ್ನೆದೆ ಮಿಡಿತವು ಇಂದು ಪ್ರೀತಿಯ ಹಾಡನೆ ಹೇಳುತಿದೆ
ನಮ್ಮಯ ಪ್ರೀತಿಯು ಅಮರ ಎಂದೆಂದಿಗೂ!
ಒಲವಿನ ಹ್ರುದಯವು ಮದುರ ಕೊನೆತನಕವೂ!

ಈ ಪ್ರೀತಿಯ ನಾ ಎನೆನ್ನಲಿ?
ಒಲವಿನ ಹ್ರುದಯವ ಹೇಗೆ ಸಂತೈಸಲಿ!

Sunday, August 19, 2007

myPOD:"ಕೂಡು-ಕುಟುಂಬ"

myKavana:"ಪ್ರೀತಿಯಲ್ಲಿ..."

ಇಲ್ಲಿ ನೀರಿದೆ ಬೆಳಕಿದೆ ತಿನ್ನಲು ಕಾಳಿದೆ ಉಸಿರಲಿ ನಲ್ಮೆಯಿದೆ...
ಹಸಿರಿನ ತೋಟದಿ ಬೀಸಲು ತುಂಬಾ ತಂಪನೆ ಗಾಳಿಯಿದೆ..

ಆದರು ನನ್ನ ನಯನವು ಮಾತ್ರ
ನಿನ್ನನೆ ಹುಡುಕುತಿದೆ..

ನೀ ಇರದಿರೆ ನಾನು ಹೇಗೆ ಬಾಳಲಿ?
ನಿನ್ನ ನೊಡುವ ಆಸೆ ಒಮ್ಮೆ ಬಾಳಲಿ.

ನಿನ್ನ ಇಹವನು ಹುಡುಕಿ ಜೊತೆಯಲಿ ಬಾಳಲು
ಜನ್ಮವ ನಾ ಪಡೆದೆ
ಅನ್ಯರ ಮರೆತು ನಿನ್ನನು ಸೇರುವ
ಸ್ವಾರ್ಥವು ನನ್ನಲಿದೆ..

ನೀ ಇರದಿರೆ ನಾನು ಹೇಗೆ ಬಾಳಲಿ?
ನಿನ್ನ ನೊಡುವ ಆಸೆ ಒಮ್ಮೆ ಬಾಳಲಿ.

ಮನದಲಿ ಮೂಡಿದೆ ನಿನ್ನದೆ ಕನಸು
ಎದೆಯಲಿ ನೋವಿಹುದು
ನೋವಲು ಏನೊ ನೆನಪುಗಳೆಂಬ
ಸಂತಸ ಸುಖವಿಹುದು

ನೀ ಇರದಿರೆ ನಾನು ಹೇಗೆ ಬಾಳಲಿ?
ನಿನ್ನ ನೊಡುವ ಆಸೆ ಒಮ್ಮೆ ಬಾಳಲಿ.

ಪ್ರೀತಿಯು ಸಹಿಸದು ಸುಳ್ಳನು ಎಂದಿಗೂ
ಇದ ನೀ ಮರೆಯದಿರು..
ಹ್ರುದಯವು ಒಡೆದರೆ ಕೂಡದು ಮತ್ತೆ
ನೋವಲಿ ಮುಂದೆಂದೂ!

ನೀ ಇರದಿರೆ ನಾನು ಹೇಗೆ ಬಾಳಲಿ?
ನಿನ್ನ ನೊಡುವ ಆಸೆ ಒಮ್ಮೆ ಬಾಳಲಿ.

Monday, August 13, 2007

myHarate:"ಹುಡು-ಕಾಟ"

weekend ನಲ್ಲಿ ನನ್ನ ಗೆಳೆಯನೊಬ್ಬನ ಮುಖ್ಯ ಕೆಲಸ ಇಸ್ಪೀಟ್ ಎಲೆ ಕಲಸುವುದು! ನಾನು ಈ 52 cardgaLa ಬಗ್ಗೆ ಮತಾಡುತ್ತಿಲ್ಲ.. ಅವನಿಗೆ ಬಂದ ಕುಂಡಲಿ ಅಥವಾ ಜಾತಕದ ಬಗ್ಗೆ ಹೇಳುತಿದ್ದೆನೆ ಅಷ್ಟೆ. ಸಮಸ್ಯೆ ಎಂದರೆ, ಮೊದಲು ಎಲ್ಲರಿಗು ಕಾಣುವುದು ಜೊಕರ್! ಮತ್ತೆ ಇರೊ ನಾಲ್ಕು ರಾಣಿಯರಲ್ಲಿ ಯಾವ color ಬೇಕು ಅಂತ ಬೇರೆ ಚಿಂತೆ.ಕೆಲವು ಎಕ್ಕನಷ್ಟು ಉದ್ದ.. ಹುಹ್.. ಅದು ದೊಡ್ಡ ಕೆಲಸವೆ ಸರಿ. ಆಡೊ ಕಳದಲ್ಲಿ ಆತನ ತಾಯಿ ತಂದೆ ಎಲ್ಲ ಇರುತ್ತಾರೆ. ಜೊಕರ್ ಕಂಡಕೂಡಲೆ ಅಮ್ಮನಿಗೆ ಭಾರಿ ಕುಶಿ, ಮಗ, ನಿನ್ಗೆ ಇದೆ ಬೆಸ್ಟ್ ಕಾಣ ಅಂತ. ಮಗನಿಗೆ ಎಳ್ಳಷ್ಟೂ ಇಷ್ಟ ಇಲ್ಲ. ಆಮ್ಮ, ಒಮ್ಮೆ ಮದ್ವೆ ಆದ್ರೆ ಜೀವನ ಪೂರ್ತಿ ಅವಳೊಟ್ಟಿಗೆ ಇರಬೇಕಲ್ವ(ಹುಡುಗನಿಗೆ ಎಲೆ ಮತ್ತೆ ಕಲಸಬೇಕೆಂಬ ಹಂಬಲ) ಎಂಬ ಸೆಂಟಿಮೆಂಟ್ ತಂದು ತಾಯಿನ ಸಮಧಾನ ಪಡಿಸ್ತಾನೆ. ತಾಯಿಗೆ ಗತಕಾಲದ flashback ನೆನಪಾಗಿ, ತಾನು ನೊಡಿದ ಮೊದಲ ಹುಡುಗನ ದಿಟ್ಟತನದಿಂದ ತಿರಸ್ಕರಿಸಿದ್ದು ನೆನಪಾಗಿ ಅಯ್ತು ಮಗ, ನಿಂಗೆ ಬೇಡ ಇದು ಅಂತಾಳೆ. ಹಮ್, ಜೊಕರ್ ಬೆರೆ ಕೈಗೆ ಪಾಸ್ ಮಾಡಿ ಅಯ್ತು. next ಕರಿ ರಾಣಿ ಬಂದಿದ್ದಾಳೆ, ಹುಡುಗನಿಗೆ ನೋಡಿ ಕುಶಿ ಆಗಿದೆ, ಆದರೆ ಅವನ ಅಪ್ಪನಿಗೆ ಕುಶಿ ಇಲ್ಲ. ಚಂದದ ಹುಡುಗಿ ತನ್ನ flashback ನಲ್ಲಿ ನೊಡಿದ ಸಹಸ್ರಾರು ಹುಡುಗಿಯರ ಅಪ್ಪನ experiment ನಲ್ಲಿ reject ಆಗಬೇಕೆ! ಹುಡುಗ ಆಡೊದನ್ನೆ ನಿಲ್ಲಿಸೊ ತೀರ್ಮನ ತೆಗೆದುಕೊಳ್ಳೊ ಆಲೊಚನೆ ಮಾಡುತ್ತಿರುವಾಗಲೆ ಅಪ್ಪನ ಕೈಯಲ್ಲಿ ಕೆಂಪಾದ ಆಟೀನು ರಾಣಿ ಕಂಡಿತು. ಅಪ್ಪ ಮಗ ಸಂತೊಷದಲ್ಲಿ ನಗುತ್ತಿರಬೇಕಿರೆ, ಭಾವಿ ಅತ್ತೆ alias ಅಮ್ಮನದು ಒಂದೆ ರಾಗ, ಅದರ ನವಗೆ ಹೇಳಿದಾಂಗೆ ಕೆಳಿಸಲೆ ಸಾದ್ಯ ಇಲ್ಲೆ, ಆಟೀನು ರಾಣಿಯ ತುಟಿ ನೊಡು, ಹುಹ್. ನವಗೆ ಇದು ಆಗ್ಲಿಕಿಲ್ಲ ಎಂಬ ಒಂದೆ ನುಡಿ. ಮಗನ ಒಂದು ಸೆಂಟಿಮೆಂಟು ಮತ್ತೆ, ಹೀಗೆ ಹುಡುಕಿಕೊಂಡು ಇದ್ದರೆ, ನಾನು ಮದೆವೆಯೆ ಆಗೊದಿಲ್ಲ ಅಂತಾನೆ, ನಾಳೆ ಹುಟ್ಟೊ ಪಿಳ್ಳೆ ನೊಡಬೇಕೆಂಬ ಹಂಬಲ ಅಮ್ಮಂದು, ಕೊನೆಗೆ ಅಮ್ಮನ ಒಪ್ಪಿಗೆ ಕೂಡಾ ಸಿಗುತ್ತದೆ.. ಇಷ್ಟೆಲ್ಲ ಆಗಿ ಉಪ್ಪಿಟ್ಟು ಅವಲಕ್ಕಿ ತಿನ್ನಲು ಆಟೀನು ರಾಣಿ ಮನೆಗೆ ಹೊಗುವಾಗ ಆಕೆಗೆ ಆತನ ಮೇಲೆ ತಿರಸ್ಕಾರ!

ಮದ್ವೆ ಆಗೋದು ಮನೆಕಟ್ಟಿದ ಹಾಗೆ, ಅಷ್ಟು ಸುಲಭ ಅಲ್ಲ ಅಲ್ವೆ?

card pack change ಆಗಿದೆ, ಆಟೀನು ರಾಣಿಗೆ ಹುಡುಕಾಟ ನಡೆಯುತ್ತಲೆ ಇದೆ! ನಿಮಗೆ ಸಿಕ್ಕರೆ ದಯವಿಟ್ಟು ತಿಳಿಸಿ!

Saturday, August 11, 2007

myHarate:"ಸ್ವಾತಂತ್ರ್ಯ ಸಂಗ್ರಾಮ"

ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದೆ ನೊಡಿ, ನಮ್ಮ bowlergaLu ಕೂಡ ಆಂಗ್ಲರನ್ನು ಬಗ್ಗುಬಡಿದಿದ್ದ್ಡಾರೆ! ಅಂತಹ bowling ಆಂಗ್ಲರದ್ದು! ಈ ಸಲ ಅಂತೂ ಕ್ರಿಕೆಟ್ ಪ್ರೆಮಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಮೆರುಗೇ ಬಂದುಬಿಟ್ಟಿದೆ. ಬಹಳ ದಿನಗಳ ಮತ್ತೆ Indiannaru ಮೈಕೊಡವಿ ನಿಂತಿದ್ದಾರೆ. batting, bowling ಯಾವುದರಲ್ಲೂ ಅಂಜದೆ ಅಡ್ಡುತ್ತಿದ್ದಾರೆ. ಓವಲ್ ಟೆಸ್ಟ್ ಸೊಲೊ ಮಾತೆ ಇಲ್ಲ, So ನಾವು ಸರಣಿ ಗೆದ್ಡಂತೆ! Hats-off to team India!

Thursday, August 9, 2007

myKavana:"ತುಂಟ-ಮಳೆ ಮತ್ತು ಆಕೆ!"

ಹೋಗುತ್ತಿದ್ದೆ ತುಸು ಸಾರೀನ ಮೇಲೆ ಕಟ್ಟಿ ಮನೆ
ಬರಬೇಕೆ ತುಂಟ-ಮಳೆ ಇಲ್ಲದಂತೆ ಕೊನೆ!
ತಲೆ ಮೇಲೆ ನೀರೆ, ನೀರೆ ಮೈಮೇಲೆ,
ಬಂತಲ್ಲ ಚಳಿ ನೀರು ಕಾಲಿಂದ ಮೇಲೆ!

ತುಂಟ ಮಳೆ ಬರುವುದನು ದೇವರೆ ಬಲ್ಲ!
ಮೈಯ ಕೇಳಲೆ ಇಲ್ಲ, ಬಿಡಿ ಕಾಲಿಗೂ ಇಲ್ಲ!
ನುಡಿ ಬೇಕು ನಡೆ ಬೇಕು, ನುಡಿದಂತೆ ನಡೆಬೇಕು
ಕೇಸು courtige ಅಲೆಯೆ ಮಳೆ ಮುಗಿಯಬಹುದು!