ಕಾನೂನು ಯಾರನ್ನೂ ಬಿಡದು!
ಈಗತಾನೆ ಹುಟ್ಟಿದ ಮಗು ಕೂಡ ಕಾನುನಿನ ಚವ್ಕಟ್ಟಲ್ಲೆ ಇರಬೇಕು. ಅಂತದ್ರಲ್ಲಿ ನಮ ಸಂಜಯ್ ದತ್ ಹೇಗೆ ತಾನೆ ಹೊರಬಂದಾರು? ಸಂಜಯ್ನನ್ನ ಮನ್ನಿಸಿದರೆ ಅದು ನಮ್ಮ ಸಣ್ಣತನ ಅನ್ನಿಸದಿರದು, ಎಷ್ಟೆ ದೊಡ್ಡ ಹೆಸರುವಾಸಿ ವ್ಯಕ್ತಿ ಆದರೂ ತಪ್ಪು ಮಾಡಿದರೆ ಶಿಕ್ಷೆ ಬೇಕಲ್ಲವೆ?
ಹೌದು, 6 ವರ್ಷ ಸೆರೆವಾಸ ತುಂಬಾನೆ ಜೀರ್ಣಿಸಲಾರದ ತೀರ್ಪು, ಸಂಜಯ್ನನ್ನ ಇನ್ನು ಹೊಸ ಸಿನೆಮಾದಲ್ಲಿ ನೊಡಲುಂಟೊ ಇಲ್ಲವೊ? ತೀರ್ಪು ಬಂದ ತಕ್ಷಣ ನ್ಯಾಯಾಧೀಶನ ಕೈಕುಲುಕಿ thanks ಎಂದು ಅಲ್ಲಿಂದ ಜೈಲಿಗೆ ಕಾಲ್ಕಿತ್ತರು ಸಂಜಯ್.. ಆ ನ್ಯಾಯಾದೀಶ ಈವರೆಗೆ 13 ವರ್ಷದ ಬಾಳನ್ನು ಸಂಜಯ್ ಗೆ ಕೊಟ್ಟಿದ್ಡ ಎನ್ನೊದನ್ನ ಮರೆಯಬಾರದು.
ಹೌದು, ಸಿನೆಮ ಜೈಲಲ್ಲಿ ಕುಳಿತುಕೊಂಡು ಮಾಡಲಾಗದು. ನಮ್ಮ software ತಂತ್ರಜ್ನರೊ, ಒಳ್ಳೆದಾಯ್ತು ಬಿಡಿ, ಜೈಲಲ್ಲಿ code ಮಾಡೊದ್ರಲ್ಲು ಭಾರಿ ಮೊಜು ಇದೆ ಅನ್ನುತ್ತಿದ್ದರೆನೊ? ಅವರಿಗೆ ಜೈಲು ಶಿಕ್ಷೆ ಉದ್ಯೊಗ ಶಿಕ್ಷೆಗಿಂತ ವಾಸಿ ಅನಿಸುತ್ತಿತ್ತೊ ಎನೊ;-) ಅದರೆ ನಮ್ಮ ಸಂಜಯ್ ಗೆ ಅದೆಲ್ಲ ಅಸಾದ್ಯವಾಗಿ ಬಿಟ್ಟಿದೆ. ಮುನ್ನಭಾಯಿ ಅಮೆರಿಕ ಚಲೇ(part 3)ಲಿ ಸಂಜಯ್ ಬಿಟ್ಟು ಬೆರೆ ಯಾರು ತಾನೆ act ಮಾಡಲು ಸಾದ್ಯ? ಮುನ್ನಭಾಯಿ ಜೈಲ್ ಚಲೆ ಅಂತ change ಮಾಡಿ ಜೈಲಲ್ಲೆ ಶೂಟ್ ಮಡಿದ್ರೆ ಮತ್ತೆ ಸಂಜಯ್ ನೊಡಬಹುದೊ ಎನೊ?
ಇಷ್ಟೆಲ್ಲ ಇದ್ದರೂ, ಸುಪ್ರೀಮ್ courtalli ವಾದ ಇನ್ನೂ ನಡೆಯಬೇಕಿದೆ, ಅದಿನ್ನೊಂದು 20 ವರ್ಷ ನಡೆದರೆ, ಜೀವನ ಪೂರ್ತಿ ಸಂಜಯ್ ಸಿನಿಮ ಸೇವೆ ಖಂಡಿತಾ ಸಿಗುತ್ತದೆ!
ಅಂದ ಹಾಗೆ 3 ಜನರ ಹಂತಕನ ವಾದ ಸುಪ್ರೀಮ್ courtalli ಇತ್ಯರ್ತ ವಾಗಿದ್ಡು, ಹಂತಕನಿಗೆ 10 ವರ್ಷ ಕಠಿನ ಶಿಕ್ಷೆಯಾಗಿದೆ, ಆದರೆ 13 ವರ್ಶದ ಹಿಂದೆ ನಡೆದಿದ್ದರಿಂದ , ಆರೊಪಿ 13 ವರ್ಷ ಜೈಲಲ್ಲೆ ಕಳೆದುದರಿಂದ, ಅವನನ್ನು ಬಿಡುಗಡೆ ಗೊಳಿಸಲಾಗಿದೆ!
ಏನು ವಿಪರ್ಯಾಸ ನೊಡಿ..
ಕಳೆದ 13 ವರ್ಷದಲ್ಲಿ ಸಂಜಯ್ ಎಷ್ಟು ಒಳ್ಳೆಯವನಾಗಿ ಬಿಟ್ಟಿದ್ದಾನೊ ಏನೊ?
ಈಗ ಶಿಕ್ಷೆ ಕೊಟ್ಟರೆ ಆತನ ಒಳ್ಳೆತನಕ್ಕೆ ಶಿಕ್ಷೆ ಕೊಟ್ಟಂತಾದರೆ ನಾವು ನಮ್ಮ ಕಾನೂನನ್ನು ಕ್ಷಮಿಸಬೇಕಷ್ಟೆ!
Tuesday, July 31, 2007
Sunday, July 29, 2007
Sunday, July 22, 2007
myHarate - "ಮುಜೇ ಭೀ ಏಕ್ ಚಾಹತ್ ಹೈ.."
ಮುಜೇ ಭೀ ಏಕ್ ಚಾಹತ್ ಹೈ..
ಮಗರ್ ಮೈ ಕಹಾ ನಹೀ ಸಕ್ತಾ..
ಜೀವನ ಎಂದರೆ ಎಷ್ಟು ಸುಂದರ , ಅಂದುಕೊಂಡದ್ದೆಲ್ಲ ಸರಿಯಾಗೆ ನಡೆದು ಹೋದರೆ!
ಜೀವನ ಎಷ್ತು ದೊಡ್ಡ ಹಂದರ, ಅಂದುಕೊಂಡದ್ದು ಒಂದೂ ನಡೆಯದಿದ್ದರೆ?
ಓ ತಾರೆ, ನೀನೆಂದು ಬೆಳಗುತಿರು.. ನನಗೆಟಕದಿದ್ದರೂ, ನಿನ್ನ ಬೆಳಕು ಕಣ್ಣ ಕುಕ್ಕಿದೆ. ಎಲ್ಲ ಮರೆತಾಗ ಮನ ಬೆಳಗಿದೆ..
ಓ ತಾರೆ ನೀ ಮರೆಯಾದರಿಂದು, ಮನಕೆ ಮೂಡಿಬರೆಯ ಮತ್ತೆ?
ಓ ತಾರೆ ಎಂತು ಕಾಂಬೆನು ನಂದ ನಂದನ ಮನದ ಬಯಲಲಿ ಎಂದಿಗೂ?
ಚಂದ್ರ ಇಲ್ಲದ ರಾತ್ರಿ ಎಲ್ಲವು ನನ್ನ ಪಾಲಿಗೆ ನೀನೇನ?
ಹಗಲ ವೇಷದಿ ಕನಸ ಹುಟ್ಟಿಸಿ ಮರೆವ ಲೋಕದಿ ಮೆರೆಯಲೆ?
ನಿನ್ನ ಸಿಹಿ ನೆನಪಲ್ಲಿ ಮರೆತಿದೆ ಬಾಳ ಬೇವಿನ ಕರಿಹೊಗೆ..
ಕಣ್ಣೆದುರು ಕುಣಿದಾಡಿ ಮಾತಾಡಿ,
ಆಟವಾಡಿ ಕೊನೆಗೊಮ್ಮೆ ಕಾಲು ಜಾರಿ
ಕೆರೆಯಲ್ಲಿ ಲೀನವಾಗಿಹೆಯಲ್ಲಾ ಗೆಳತಿ...
ಗೆಳತೀ... ನಾನೆಂದೂ ಕ್ಷಣಿಕ, ನೀಯೆಂದೂ ಅಮರ, ನಾವೆಂದೂ ಮಧುರ...
ಮುಜೇ ಭೀ ಏಕ್ ಚಾಹತ್ ಹೈ..
ಮಗರ್ ಮೈ ಕಹಾ ನಹೀ ಸಕ್ತಾ..
ಇಂತೀ ನಿನ್ನವ,
ಅನಾಮಿಕ!

Sunday, July 15, 2007
Saturday, July 14, 2007
myHarate:"ನೆನಪಿಸಿದ್ದು ಮತ್ತು ಹೀಗೆ ಬ್ಲಾಗಿಸಿದ್ದು"
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
ಎದೆಯಾಳದಲಿ ಬಚ್ಚಿಕೊಂಡಿರುವ ಸಾವಿರ ಕಾಲಕು ಸಾಯದ ನೆನಪು!
ಏಲ್ಲಿ ಹೋಯ್ತು ಆ ದಿನಗಳು? ಹೌದು ಕಣೊ/ಕಣೆ.. ನಂಗು ಗೊತ್ತು, ನಿಂಗು ಗೊತ್ತು.. ಅವು ಬರಲ್ಲ.. ಬಂದರೂ ನಮಗೆ ಅವನ್ನ ಅದೇತರ enjoy ಮಾಡಕ್ಕೆ ಅಗಲ್ಲ ಅಂತ. ಆಶಾಢ.. ಆಟಿ ತಿಂಗಳು ಅಂತ ಕರೀತಾರೆ.. ಮದ್ವೆಯಾಗಿ ಹೋದ ಅಕ್ಕ...
ಆಶಾಢ ಮಾಸ ಬಂದೀತವ್ವ.. ಕಾಸ ಅಣ್ಣ ಬರಲಿಲ್ಲವ್ವ..
ಅಂತ ಪರಿತಪಿಸಿಕೊಳ್ಳುವಾಗ.. ಆಕೆಗಿದ್ದ ಒಬ್ಬನೆ ತಮ್ಮ ಹೋಗಿ ಭಾವನನ್ನು ಸಮಾದಾನಪಡಿಸಿ ಕರೆತರುವ ಯುಕ್ತಿ ಇದೆಯಲ್ಲ.. ಎಲ್ಲರಿಂದಾಗದು.. ಭಾವನ ಪೆಚ್ಚುಮೋರೆಗೆ ಟಾಟಾ ಹೆಳಿ ಅಕ್ಕನನ್ನು ಮತ್ತೆ ಮನೆಗೆ ಕರೆತಂದು ಮನೆತುಂಬ ಮಾಡಿದ ಗಲಗಲ ಸದ್ದು:-) ಯಾರುತಾನೆ ಮರೆವರು? ಪಕ್ಕದ್ಮನೆ ಬಚ್ಚಲಿನಿಂದ ಬಿರುಸುಮಳೆಗು ಎದ್ದು ಬರುವ ಅಗಾಧ ಹೊಗೆ! ಹಲಸಿನ ಸೋಂಟೆ ತಿನ್ನುತ್ತ ಅಡಿದ ಚೆನ್ನಮೆಣೆ ಆಟ!
ಈ ನೆನಪು ಎಂಬುದು ಏನ್ ಮಹಾಶಕ್ತಿ ಅಂತೀಯ?
ಏಲ್ಲಮರೆತಿರುವಾಗ ಇಲ್ಲಸಲ್ಲದ ನೆವವ
ಹೇಳಿ ಬರುವವು ಮನಕೆ ಮಧುರ ನೆನಪು.. ಈ ಮಧುರ ನೆನಪು!
ಅದು ಬೇಕೆಂದರೆ ಬರುವಂತದ್ದಲ್ಲ.. ಹಾಗೆ ಹೋಗೆಂದರೆ ಹೊಗ್ವಂತದ್ದೂ ಅಲ್ಲ..ಈನ್ನೂ ಸುಲಭವಾಗಿ ಹೆಳುವುದಿದ್ದರೆ ನೆನಪನ್ನು ಯಾವಗ ಬರುತ್ತೆ ಅಂತ ನೆನಪಿಟ್ಟುಕೊಳ್ಳಲು ಸಾದ್ಯವಿಲ್ಲ!

Wednesday, July 11, 2007
myHarate:"ಗೋಡೆಗಡಿಯಾರ"
ಗಂಟೆ ಮತ್ತೆ ನಿಂತಿದೆ. ನನ್ನ ಬಿಟ್ಟು ಬೇರೆ ಯಾರೂ ನಮ್ಮ ಮನೆಲಿ ಅದನ್ನ ನಡೆಸರು. ವಾರಕ್ಕೊಮ್ಮೆ ಎರಡೂ ಕಿವಿ ಹಿಂಡದಿರೆ ಈ ದೊಡ್ಡ ಗೋಡೆಗಡಿಯಾರ full flat. ಅತ್ತ ಎಷ್ಟೆಷ್ಟೊ ಸಲ ಹುಚ್ಚುಚ್ಚಾಗಿ ಹೊಡಕೊಳುತ್ತೆ, ಇತ್ತ ಪೆಂಡುಲಮ್ ಗರ ಬಡಿದವರ ತರಹ ನಿಂತು ಬಿಡುತ್ತೆ. ಈ antiquity ಈಗಲೂ ನನ್ನ ಮನೆಯಲ್ಲಿ ಎಲ್ಲ ಅತಿಥಿಗಳನ್ನ ಸ್ವಾಗತಿಸುತ್ತದೆ. ಎಷ್ಟು adjust ಮಾಡಿದರೂ ಸ್ವಲ್ಪ ಹೆಚ್ಚು ಕಮ್ಮಿ ಆಗಿಯೆ ನಡೆಯುವ ಇದು ನಮ್ಮ ಜೀವನಕ್ಕೊಂದು challenge ಆಗಿಯೆ ಬಿಟ್ಟಿದೆ! ಹಾಗೆ ರಾತ್ರೆ ಕಣ್ಣಿಗೆ ನಿದ್ದೆ ಹತ್ತಿಕೊಂಡಾಗ ಹನ್ನೆರಡು ಹೊಡೆದು ಎಚ್ಚರ ಮಾಡುತ್ತೆ.. ಈಗಿನ ಗಡಿಯಾರಗಳಂತೆ ಬೆಳಕಿಗೆ sensitive ಅಲ್ಲ ಇವು. ನನ್ನ ಕಲಿಕೆಯ ದಿನಗಲಲ್ಲಿ ಪ್ರಾತಃಕಾಲ 5ಕ್ಕೆ ಸರಿಯಾಗಿ ಎಳಿಸುತ್ತಾ ಇತ್ತು. ಇನ್ನೂ ನನ್ನ ಇಷ್ಟ ಪಟ್ಟ ವಸ್ತುಗಳ ದ್ರುಷ್ಟಿಯಿಂದ ದೂರ ಹೋಗಲಿಲ್ಲ.
ಸಾವಿರಾರು ಗಡಿಯಾರಗಳು ಅತ್ತ ಇತ್ತ ಬಿದ್ದಿದ್ದರು ಗೋಡೆಗಡಿಯಾರಕ್ಕೆ ಅದರದೆ ಆದ ಸ್ತಾನ ಇದೆ ಕನ್ರೀ.. ಅಜ್ಜನ ಕಾಲಂದಲೂ ಅದೆಷ್ಟೊ ವಸಂತಗಳನ್ನ ಕಾಣುತ್ತಾ ಬಂದಿದೆ. ಅದು ಹೊಡೆದ ಗಂಟೆಗೆ ಎಣಿಕೆಯಿಲ್ಲ, ತಿರುಗಿದ ಸುತ್ತಿನ ಲೆಕ್ಕ ಇಲ್ಲ. ನನ್ನೊಂದಿಗೆ ನಡೆಯುತ್ತಿರಲಿ ಎನ್ನುವ ಅಶೆಯೊಂದಿಗೆ...

Tuesday, July 10, 2007
myHarate:"ಇರದವರೆಡೆಗೆ ತುಡಿವುದೂ ಜೀವನ..."
ಅನುಕೂಲ.. ಅನುಕೂಲ.. ಅನುಕೂಲ.. ಎಲ್ಲರಿಗೂ ಬೇಕಾಗಿರೋದು ಅನುಕೂಲ.. ಅದಕ್ಕಾಗಿ ಏನು ಮಾಡಲಿಕ್ಕೂ ತಯಾರಿರುತ್ತಾರೆ. ಎಲ್ಲರೂ ದುಡಿಯೋದು ಬರೀ ಹೊಟ್ಟೆಗಾಗಿ ಮತ್ತು ಬಟ್ಟೆಗಾಗಿ ಅಲ್ಲರೀ.. ಅನುಕೂಲಕ್ಕಾಗಿ!
ಅನುಕೂಲ.. ಅನುಕೂಲ... ಅಂತ ಅಸ್ಪತ್ರೆ ಪಕ್ಕ ಮನೆಕಟ್ಟಬೇಕೆ ಹೊರತು ಅಸ್ಪತ್ರೆಯನ್ನೆ ಮನೆ ಮಾಡುವಂತಾಗಬಾರದು ತಾನೆ?
ನಮ್ಮೆಲ್ಲ ಅನುಕೂಲಕ್ಕೆ ಹಗಲಿರುಳು ಯೋಚಿಸುವಾಗ ಒಂದ್ನಿಮಿಷಾ ಬೇರೆವರ ಹಿತಕ್ಕೆ ಯೋಚನೆ ಮಡ್ತೆವಾ ನಾವು?
ಜೀವನ ಅಂದ್ರೆ ನಾವ್ ಹೇಗೆ ಜೀವಿಸ್ತೀವಿ ಅನ್ನೊವಷ್ಟೆ ಉಳಿದವರ ಜೀವಕೆ ನಾವೆಂತು ಹಿತವರು ಎಂಬುದೂ ಮುಖ್ಯವಲ್ಲವೆ?
ಮಳೆ ಬಂದಾಗ ಎಲ್ಲರ ಮರದಡಿ ನಿಲ್ಲಿಸಿ ನಾವ್ ಮಾತ್ರ ಬಸ್ಸನೇರಿ ಹೊಗುವಂತಿರಬಾರದು ಅಲ್ವೇನೆ?
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?
ಇರುವುದೆಲ್ಲವ ಇರಿಸಿ ಇರದವರೆಡೆಗೆ ತುಡಿವುದೂ ಜೀವನ!

Sunday, July 8, 2007
Friday, July 6, 2007
Wednesday, July 4, 2007
myKavana:"ಪ್ರೀತಿ ನೀ ಇರದಿರೆ"
ಪ್ರೀತಿ ನೀ ಇರದಿರೆ ನಾನು ಹೇಗಿರಲಿ?
ಪ್ರೀತಿ ನೀ ಮರೆತರೆ ಹೇಗೆ ಬದುಕಿರಲಿ?
ನನಗಾಗಿ.. ನೀ ಯುವಕರಿಗೆ ಗುರುವಾಗಿ...
ಮನಸಿನ ತುಂಬ ಮುದವಿಹುದು, ಕನಸಿನಲಿ ಸುಖವಿಹುದು, ಓ ಪ್ರೀತಿ ನಿನ್ನಿಂದ!
ಮಾತುಗಳೆ ಬರದಾಯ್ತು, ಆಸೆಗಳೆ ತುಂಬಿಹುದು ಓ ಪ್ರೀತಿ ನಿನ್ನಿಂದ!
ನಮ್ಮ ಪ್ರೀತಿ ಕೊನೆತನಕ....
ಪ್ರೀತಿಸಿದೆ, ನೋಯಿಸದೆ
ಕೈಹಿಡಿದು ಮುನ್ನಡೆಸು..
ಪ್ರೀತಿ ನೀ ಇರದಿರೆ ನಾನು ಹೇಗಿರಲಿ?
ಪ್ರೀತಿ ನೀ ಮರೆತರೆ ಹೇಗೆ ಬದುಕಿರಲಿ?
ದಿನವೆಲ್ಲ ಇರುಳಾಯ್ತು, ಇರುಳೆಲ್ಲ ಹಗಲಾಯ್ತು, ಓ ಪ್ರೀತಿ ನಿನ್ನಿಂದ!
ತಾರೆಗಳು ಮರೆಯಾಯ್ತು, ಮೊಡಗಳು ಮಳೆಯಾಯ್ತು, ಓ ಪ್ರೀತಿ ನಿನ್ನಿಂದ!
ಮಾಘ ಮಾಸ ಚಳಿಯಲ್ಲಿ....
ನೆನಪುಗಳು ಮುತ್ತಿಡಲು
ಕನಸುಗಳು ಕೆದಕಿರಲು...

Tuesday, July 3, 2007
Sunday, July 1, 2007
myReview:"ದುನಿಯಾ"
ಬತ್ತಾ ಇರ್ಬೇಕು, ಹೊತ್ತಾ ಇರ್ಬೇಕು! ಇದೇ ದುನಿಯಾ ಕಣಣ್ಣೋ! ಪ್ರೆಕ್ಷಕನೂ ಬತ್ತಾ ಇದ್ದಾನೆ, ಹೊತ್ತಾ ಇದ್ದಾನೆ. ದುನಿಯಾ ಗೆದ್ದು ಬಿಟ್ಟಿದೆ! ತುಂಬಾ ಸರಳ movie. ಆಢಂಬರವಿಲ್ಲ. ನೈಜತೆ ಇದೆ. ಎನನ್ನಬೆಕೊ ಅದನ್ನ ನೇರವಾಗಿ ಹೇಳಿದ್ದಾರೆ. ಹೀರೊ ನೈಜವಾಗಿ act ಮಾಡಿದ್ದಾನೆ. ಡೈಲಾಗ್ಸ್ ಚೆನ್ನಾಗೆ ಹೆಳ್ತಾನೆ. fightu ಸಕತ್ತಾಗೆ ಇದೆ. duet ಯಾಕೊ ಅವಂಗೆ ಸರಿಹೊಗಲ್ಲ! ಸೂರಿಯ direction different ಆಗಿದೆ. ಒಂದೆರಡು songs ಮತ್ತೆ ಮತ್ತೆ ಕೆಳ್ಬೇಕು ಅನ್ಸುತ್ತೆ. ಮಚ್ಚು ಲಾಂಗು ಇದೆ. family sentiments ಇದೆ. ಎಲ್ಲರ ಮೆಚ್ಚಿಸೊ ಪ್ರೀತಿಯಿದೆ. ಸತ್ಯ ಹೇಳಬೇಕೆಂದರೆ, ಎಲ್ಲದ್ರಲ್ಲು ನೈಜತೆ ಇದೆ. ಇಷ್ಟು ಸಾಕಿತ್ತು ದುನಿಯ ಹಿಟ್ ಆಗಕ್ಕೆ. ದುನಿಯಾ ಯಾಕೆ ಹಿಟ್ ಅಯ್ತು ಅನ್ನೊದಕ್ಕೆ ನೆನ್ನೆ answer ಸಿಕ್ತು!
Subscribe to:
Posts (Atom)